Thursday 2 December 2021

ಶರಣು ಶರಣೂ ಮಹಾದೇವರಾ ಗರ್ಭದಲಿ ankita hayavadana SHARANU SHARANU MAHAADEVARAA GARBHADALI



ಶರಣು ಶರಣೂ ||ಪ||

ಮಹದೇವರಾ ಗರ್ಭದಲ್ಲಿ ಉದ್ಭವಿಸಿದಿಯೊ ನೀನು 
ಸಾಧುವಾತೆಯ ಶಾಪವನ್ನು ಕೈಗೊಂಡು 
ಆದಿಪೂಜೆಗೆ ಅಭಿಮಾನಿದೇವತೆಯಾದಿ 
ಮಾಧವ ನಮ್ಮ ಹಯವದನನ್ನ ಪ್ರಿಯ||೧||

ಹಿಮಗಿರಿಗೆ ಮಗಳಾಗಿ ಜನಿಸಿ ತಪವನುಗೈದು 
ಕಮಲಸಂಭವಸುತನ ಒಲಿಸಬೇಕೆಂದು 
ರಮಣಿ ರಾಮಮಂತ್ರ ದಿನಸಹಸ್ರವು ಜಪಿಸೆ 
ಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ||೨||

ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿ 
ಕಡು ಘೋರ ತಪಗೈಯೆ ಮನ್ಮಥನು ಬರಲು 
ಕಿಡಿಗಣ್ಣಿನಲ್ಲಿ ಅವನ ಭಸ್ಮವನು ಮಾಡಿದಿ 
ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ||೩||

ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲು 
ತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲು 
ಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರ 
ಅಚ್ಯುತ ನಮ್ಮ ಹಯವದನನ್ನ ಪ್ರಿಯೆ||೪||

ಈರೇಳು ಲೋಕದ ಜನರ ನಾಲಿಗೆಯಲ್ಲಿ 
ಬೀಜವನು ಬಿತ್ತಿ ಅನ್ನವ ಕೊಡುವ ತಾಯೆ 
ವಾರಿಜ ಸಂಭವನ ಹಿರಿಯ ಪಟ್ಟದ ರಾಣಿ 
ನೀರಜಾಕ್ಷ ನಮ್ಮ ಹಯವದನನ್ನ ಪ್ರಿಯೆ||೫||

ಕೇಸರಿಯ ಗರ್ಭದಲ್ಲಿ ಉದ್ಭವಿಸಿದಿಯೊ ನೀನು 
ತ್ರೇತೆಯಲಿ ರಾಮರ ಸೇವೆಯನು ಮಾಡಿ 
ಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀ 
ಶ್ರೀಪತಿ ಹಯವದನ ದೂತ ಪ್ರಖ್ಯಾತ||೬||

ಅನಂತ ನಾಟಕಾನಂತ ಸೂತ್ರಧಾರಿ 
ಅನಂತ ಚರಿತ ನಿತ್ಯಾನಂದಭರಿತ 
ಅನಂತಾಸನ ಶ್ವೇತದ್ವೀಪ ವೈಕುಂಠ 
ಅನಂತಗುಣಭರಿತ ಹಯವದನ ಚರಿತ||೯||

ಶರಣು ಮತ್ಸ್ಯ ಕೂರ್ಮ ವರಾಹ ನಾರಸಿಂಹ 
ಶರಣು ವಾಮನ ಭಾರ್ಗವ ರಾಮಚಂದ್ರ 
ಶರಣು ಕೃಷ್ಣ ಬೌದ್ದ ಕಲ್ಕ್ಯ ಸ್ವರೂಪನೆ
ಶರಣು ಹಯವದನನ್ನ ಚರಣಗಳ ನುತಿಪೆ||೧೦||

Sharaṇu sharanu ||pa||

Mahadevara garbhadalli udbhavisidiyo ninu 
sadhuvateya shpavannu kaigonḍu 
ādipūjege abhimānidēvateyādi 
mādhava nam'ma hayavadananna priya||1||

himagirige magaḷāgi janisi tapavanugaidu 
kamalasambhavasutana olisabēkendu 
ramaṇi rāmamantra dinasahasravu japise 
kamalākṣanem'ma hayavadananna priye||2||

maḍadi hōdāgrahake jaḍeya kittappaḷisi 
kaḍu ghōra tapagaiye manmathanu baralu 
kiḍigaṇṇinalli avana bhasmavanu māḍidi 
kaḍaloḍeya nam'ma hayavadananna priya||3||

Matsyadēśake pōgi manada cinteyaliralu 
tuccharakkasanu nim'manu piḍiya baralu 
cittadollabhag'hēḷi koccisidi avana śira 
acyuta nam'ma hayavadananna priye||4||

īrēḷu lōkada janara nāligeyalli 
bījavanu bitti annava koḍuva tāye 
vārija sambhavana hiriya paṭṭada rāṇi 
nīrajākṣa nam'ma hayavadananna priye||5||

kēsariya garbhadalli udbhavisidiyo nīnu 
trēteyali rāmara sēveyanu māḍi 
bhūtaḷadoḷu bhīma kaḍege yatiyāgi nī 
śrīpati hayavadana dūta prakhyāta||6||

Janani huṭṭida nāḷadalli janiside nīnu 
janara sr̥ṣṭi sthitige kāraṇanendu 
animiṣarellarū stutisi koṇḍāḍalu 
vanajākṣa nam'ma hayavadananna priya||7||

padmadalludbhavisi rāmara kaihiḍidu 
padmākṣana rathake kai nīḍi bande 
padmāvati endu khyāti mūrlōkadoḷu 
padmākṣa nam'ma hayavadananna priye||8||

Ananta nāṭakānanta sūtradhāri 
ananta carita nityānandabharita 
anantāsana śvētadvīpa vaikuṇṭha 
anantaguṇabharita hayavadana carita||9||

śaraṇu matsya kūrma varāha nārasinha 
śaraṇu vāmana bhārgava rāmacandra 
śaraṇu kr̥ṣṇa baudda kalkya svarūpane
śaraṇu hayavadananna caraṇagaḷa nutipe||10||
****


ಶರಣು ಶರಣೂ ಪ.

ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1

ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2

ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3

ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4

ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5

ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6

ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7

ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8

ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9

ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
******

No comments:

Post a Comment