Friday, 27 December 2019

ಶ್ರೀರಾಘವೇಂದ್ರರಾಯ ಎನ್ನ ಭವಭಾರ ankita gurujagannatha vittala

by ಗುರುಜಗನ್ನಾಥದಾಸರು
ಶ್ರೀ ರಾಘವೇಂದ್ರರಾಯ- ಎನ್ನ-ಭವಭಾರನಿನ್ನದೊ ಜೀಯ್ಯಾದೂರನೋಡದಲೀಗ ಕೈಯಾ - ಪಿಡಿದು ನೀಸಾರೆಗರಿಯೋ ಸೂರಿಧ್ಯೇಯಾ 1

ನಿನ್ಹೊರತು ಗತಿಯಾರೊ ಎನಗೆ - ಈಗಬಿನ್ನಪವ ಮಾಳ್ಪೆ ನಾ ನಿನಗೆ - ಭವದಿಬನ್ನಬಡುವವನ ನೋಡಿ ಹೀಗೆ 2

ಈಸುವತ್ಸರವ್ಯರ್ಥ ಕಳದೆ- ನಾನಿನ್ನಈಶ ನೀನೆಂಬುದನು ಮರೆದೆ - ಬಹುಕ್ಲೇಶಬಟ್ಟೀಪರಿಯಲುಳದೆ 3

ಸರಸ ವಿಙ್ಞÕನಭಕುತಿನೇಮಾ - ನೀನಿತ್ತುಪೊರೆಯೊ ನೀ ಭಕ್ತವತ್ಸಲ 4

ಎನು ಕರುಣಾನಿಧಿಯೊ ನೀನು - ಜಗದೊಳಗೆಸಾನುರಾಗದಿ ಭಜಿಪೆ ನಾನು - ತವಚರಣಧ್ಯಾನ ಪಾಲಿಪದೀಗ ನೀನು 5

ಕೃಷಿಯಾದಿ ಸತಿ-ಸುತರ ಪ್ರೇಮಿ - ಎನಿಸಿತೃಷೆಯಗೊಂಡೆನೊ ಅಂತರಯಾಮಿ 6

ನರರ ಯಾಚನೆ ಮಾಡಸಲ್ಲ - ದೇಶವನುಪರಿಪರಿಯ ಭವಣೆ ಸುಳ್ಳಾಗದಲ್ಲ- ಸರ್ವಙÕಸರ್ವ ನೀ ತಿಳಿದಿರುವಿಯಲ್ಲ 7

ನೀಚಜನ ಮನೆ ಮನೆಗೆ ಪೋಗಿ - ನಾನುಯಾಚಿಸಿದೆ ನಾಚಿಕೆಯನೀಗಿಯೋಚನಿಲ್ಲದೆ ನಾನು ಕೂಗಿ - ಈಗ!ನೀಚನಾದೆನೊ ಕಾಯೋ ಪರಮಯೋಗಿ 8

ಶೇಷಾದ್ರಿನಿಲಯ ವಾಸ - ಪದದೂತವಾಸವಾಗೆಲೊ ಮನದಿ ತೋಷ - ಪೊರೈಸೊದಾಸಜನಪ್ರಿಯ ಯೋಗೀಶಾ 9

ದುಷ್ಟ ಜನ ತತಿಯ ಸಂಗ - ಬಿಡಿಸಿಇಷ್ಟು ಪಾಲಿಸ್ಯನ್ನಂತರಂಗ - ದೊಳಗೆತುಷ್ಟನಾಗಿರು ನೀನೆಕರುಣಾಪಾಂಗ10

ಪೋತನಾ ನಿನಗಲ್ಲೆ ಜೀಯಾ- ಎನಗೆತಾತನೀನೆಂಬೊ ಮಾತು ಖರಿಯನ್ನಾಥ ವಿಠಲಗೆ ನೀನೆ ಪ್ರಿಯ 11
********

No comments:

Post a Comment