Friday 27 December 2019

ಸೋದಾಪುರದಲಿ ನಿಂತ ಸುಯತಿವರನ್ಯಾರೇ ankita gurujagannatha vittala

by ಗುರುಜಗನ್ನಾಥದಾಸರು
ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯಾ ಪ

ಭೂಧರಹÀಯಮುಖ ಪಾದವ ಭಜಿಸುವವಾದಿಗಜಕೆ ಮೃಗರಾಜ ಕಾಣಮ್ಮ ಅ.ಪ

ಅಂಚೆವಾಹನ ಪ್ರಪಂಚದಿ ಪೊಳೆವ ವಿ -ಸಂಚಿತಕರ್ಮವ ಕುಂಚಿಸಿ ಭಕ್ತರಮುಂಚಿಗೆ ಪ್ರಾಣವಿರಿಂಚಿಕಾಣಮ್ಮಾ1

ಬೃಂದಾರಕಪ್ರತಿಸುಂದರ ಯತಿವರಇಂದುಮುಖಿಯೆ ಈತ ಗಂಧವಾಹÀನನಾಗಿಮಂದಜಾಸನಪದವೈದುವ ನಮ್ಮಾ2

ಖ್ಯಾತಮಹಿಮ ಮಾಯಿವ್ರಾತ ವಿ -ದಾತಗುರುಜಗನ್ನಾಥವಿಠಲನವೀತಭಯಪುರುಹೂತಪ್ರಮುಖನುತಭೂತನಾಥನ ಪಿತ ಮಾತರಿಶ್ವನಮ್ಮಾ 3
***

ಸೋದಾಪುರದಲ್ಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ || pa ||
ಭೂಧರ ಹಯಮುಖ ಪಾದವ ಭಜಿಸುವ
ವಾದಿಗಜಕ ಮೃಗರಾಜ ಕಾಣಮ್ಮ || a pa ||

ಅಂಚೆವಾಹನ ಪ್ರಪಂಚದಿ ಪೊಳೆವ ವಿ-ರಿಂಚಿಗೆ ಸಮನೇನೆ ಪೇಳಮ್ಮಯ್ಯಾ
ಸಂಚಿತ ಕರ್ಮ ಕುಂಚಿಸಿ ಭಕ್ತರ ಚಂಚಲ ಬಿಡಿಸುವನ್ಯಾರೇ ಪೇಳಮ್ಮಯ್ಯಾ
ಮಿಂಚುರಾಶಿಗೆ ಸಮ ಪಂಚವೃಂದಾವನ ಲಾಂಛಿತನಾಗಿಹನ್ಯಾರೆ ಪೇಳಮ್ಮಯ್ಯಾ
ಚಂಚಲಾಕ್ಷಿ ತಿಳಿ ಪಂಚರೂಪಾತ್ಮಕ ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮಾ || 1 ||

ಮಂದಹಾಸ ಮುಖ ಕುಂದ ಕುಟ್ಟಲರದದಿಂದ ಶೋಭಿಪನ್ಯಾರೇ ಪೇಳಮ್ಮಯ್ಯಾ
ವಂದಿಪ ಜನರಘ ವೃಂದ ಕಳೆದು ಆನಂದ ನೀಡುವನ್ಯಾರೇ ಪೇಳಮ್ಮಯ್ಯಾ
ಬೃಂದಾರಕ ಪ್ರತಿ ಸುಂದರ ಯತಿವರರಿಂದ ಪೂಜಿತನ್ಯಾರೇ ಪೇಳಮ್ಮಯ್ಯಾ
ಇಂದುಮುಖಿಯೆ ಈತ ಗಂಧವಾಹನನಾಗಿ ಮಂದಜಾಸನಪದವೈದುವ ನಮ್ಮಾ || 2 ||

ಖ್ಯಾತಮಹಿಮ ಮಾಯಿವಾತ ವಿಘಾತವ ಮಾಡಿಹನ್ಯಾರೇ ಪೇಳಮ್ಮಯ್ಯಾ
ಆತುರ ಜನರಿಗೆ ಮಾತಾಪಿತರಂತೆ ನೀತಪಾಲಿಪನ್ಯಾರೆ ಪೇಳಮ್ಮಯ್ಯಾ
ದಾತ ಗುರು ಜಗನ್ನಾಥವಿಠಲನ ಪ್ರೀತಿಯ ಪಡೆದಿಹನ್ಯಾರೇ ಪೇಳಮ್ಮಯ್ಯಾ
ವೀತಭಯ ಪುರುಹೂತ ಪ್ರಮುಖ ನುತ ಭೂತನಾತನ ಪಿತ ಮಾತರಿಶ್ವ ನಮ್ಮಾ || 3 ||
***

Sōdāpuradalli ninta suyativaran’yārē pēḷam’mayya || pa ||

bhūdhara hayamukha pādava bhajisuva vādigajaka mr̥garāja kāṇam’ma || a pa ||

an̄cevāhana prapan̄cadi poḷeva vi- rin̄cige samanēne pēḷam’mayyā san̄cita karma kun̄cisi bhaktara can̄cala biḍisuvan’yārē pēḷam’mayyā min̄curāśige sama pan̄cavr̥ndāvana lān̄chitanāgihan’yāre pēḷam’mayyā can̄calākṣi tiḷi pan̄carūpātmaka mun̄cige prāṇa virin̄ci kāṇam’mā || 1 ||

mandahāsamukhakundakuṭṭalarada dinda śōbhipan’yārē pēḷam’mayyā vandipa janaragha vr̥nda kaḷedu ā nanda nīḍuvan’yārē pēḷam’mayyā br̥ndāraka prati sundara yativara rinda pūjitan’yārē pēḷam’mayyā indumukhiye īta gandhavāhananāgi mandajāsanapadavaiduva nam’mā || 2 ||

khyātamahima māyivāta vi ghātava māḍ’̔ihan’yārē pēḷam’mayyā ātura janarige mātāpitarante nītapālipan’yāre pēḷam’mayyā dāta gurujagannāthaviṭhalana prītiya paḍedihan’yārē pēḷam’mayyā vītabhaya puruhūta pramukha nuta bhūtanātana pita mātariśva nam’mā || 3 ||

Plain English

Sodapuradalli Ninta Suyativaran’yare Pelam’mayya || Pa ||

Bhudhara Hayamukha Padava Bhajisuva Vadigajaka Mrgaraja Kanam’ma || A Pa ||

Ancevahana Prapancadi Poleva Vi- Rincige Samanene Pelam’mayya Sancita Karma Kuncisi Bhaktara Cancala Bidisuvan’yare Pelam’mayya Mincurasige Sama Pancavrndavana Lanchitanagihan’yare Pelam’mayya Cancalaksi Tili Pancarupatmaka Muncige Prana Virinci Kanam’ma || 1 ||

Mandahasamukhakundakuttalarada Dinda Sobhipan’yare Pelam’mayya Vandipa Janaragha Vrnda Kaledu A Nanda Niduvan’yare Pelam’mayya Brndaraka Prati Sundara Yativara Rinda Pujitan’yare Pelam’mayya Indumukhiye Ita Gandhavahananagi Mandajasanapadavaiduva Nam’ma || 2 ||

Khyatamahima Mayivata Vi Ghatava Mad’ihan’yare Pelam’mayya Atura Janarige Matapitarante Nitapalipan’yare Pelam’mayya Data Gurujagannathavithalana Pritiya Padedihan’yare Pelam’mayya Vitabhaya Puruhuta Pramukha Nuta Bhutanatana Pita Matarisva Nam’ma || 3 ||
****

No comments:

Post a Comment