Wednesday 13 November 2019

ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ ankita govinda

by ಗೋವಿಂದದಾಸ
ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನಗೋಪಿಕಂದನೇ | ಮುಕುಂದನೆದುಷ್ಟರ ಶಿಕ್ಷಿಪಘೋರಕಾಲನೆ | ರಣಶೂರನೆ |ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪಹೊಳೆವ ಮತ್ಸ್ಯಾವತಾರನೆನ್ನಿಸಿಇಳೆಯ ಭಾರವ ಕಳೆದನೆ ||ಜಲದಿವಾಸವಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ 1

ಧರೆಯ ಬೆನ್ನಲಿ ಪೊತ್ತು ನೆಲಸಿದಕೂರ್ಮನೆ |ಸ್ಮøತಿಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ |ಮರ್ಮವರಿತೇ | ಸುಶರ್ಮನೆ 2

ರಸತಳದಿ ಕೆಸರೊಳಗೆ ಹೊರಳುವಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನಕೊಂದೆಯೇ ಮಮ ತಂದೆಯೇ 3

ಕಂಬದಲಿ ಮೈದೋರಿ ತರಳನ |ಪೊರೆದನೇ ನರಸಿಂಹನೇಕುಂಭಿನಿಯ ಬಾಧಿಸಲು ದುರುಳನ |ಕರುಳನೇ ಹರಿದೆಳದನೇ 4

ಭೂಮಿಯಲಿ ಮೂರಡಿಯದಾನವ ಕೊಟ್ಟಾನೇಬಲಿಕೆಟ್ಟಾನೇವಾಮನನು ಎರಡಡಿಯ ತೀರಿಸಿ |ಮೆಟ್ಟುತಲಿವರಕೊಟ್ಟನೇ 5

ಕೊರಳ ಕುತ್ತಿಯೆ ಮಾಲೆಮಾಡುತ್ತಾಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆಭಾರ್ಗವ|ಸತ್ಯ ಭೂಮಿಯ ಸುತ್ತಿದೆ6

ವನದಿ ರಾಮನ ಸತಿಯರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರಕೊಂದನೆ ಸೀತೆಯ ತಂದನೇ 7

ಸರಸಿಯಲಿ ಮೊರೆಯಿಡುವ ಗಜವ |ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ |ದೇವನೇ ಮಾಧವನೇ 8

ಬತ್ತಲೆಯ ಬೌದ್ಧಾವತಾರನೆ |ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ |ಸೊಕ್ಕ ಮುರಿವನೆ ಪಕ್ಕನೆ 9, 10

ಕಲಿಯುಗದ ಕಡುಪಾಪಿ ನರರನು |ಕಡುಗದಿಂದಲಿ ಕಡಿದನೇ ||ಕಾಲಭೈರವನಂತೆ ಕಲ್ಕ್ಯನು |ಕಿಡಿಯನುಗುಳುತ ಸುಡುವನೇ 11

ದಾಸಜನರನು ಪೊರೆವಶ್ರೀನಿವಾಸನೇ | ಜಗದೀಶನೇ |ಶೇಷಶಯನನೆಂದೆನಿಪ |ಗೋವಿಂದನೇ | ಗುಣವೃಂದನೇ 12
*********

No comments:

Post a Comment