Monday 11 November 2019

ಗೋಕುಲ ಕೃಷ್ಣ ಗೋಪಿಸ್ತ್ರೀಯರ ಕೂಡೆ ankita govinda

by ಗೋವಿಂದದಾಸ
ಗೋಕುಲ ಕೃಷ್ಣ ಗೋಪಿಸ್ತ್ರೀಯರ ಕೂಡೆ ||ಲೋಕ ಮೋಹನ ಲೀಲೆ ತೋರಿದನಲ್ಲಿ ||ಆ ಕನ್ಯೆಯರಿಗೆಲ್ಲ ಬೇಕಾದರೂಪ ತೋರಿ ||ಸಾಕಾರಿಯಾಗಿರೆ ಬಳಿಕೊಂದು ದಿವಸ 1

ಸೀರೆ ಕುಪ್ಪಸ ತೊಟ್ಟು | ಹಾರ ಕಡಗವಿಟ್ಟು |ನಾರಿಯೊಬ್ಬಳುಕ್ಷೀರಮಾರುತ್ತ ಬರಲೂ ||ಕೇರಿ ಕೇರಿಗಳಲ್ಲಿ ಚರಿಸುತ್ತಲಿರೆ ಕಂಡು |ವಾರಿಜಾಕ್ಷನು ನಡೆತಂದು ತಾ ನಗುತ್ತ 2

ನೀಲಕುಂತಳೆ ಗುಣಶೀಲೆ ಚಂದಿರಮುಖಿ |ಹಾಲ ಸುಂಕವ ಕೊಟ್ಟು ಪೋ | ಗವ್ವ ಚದುರೆ ||ಕೇಳಿಮಾನಿನಿಕ್ರೋಧ ತಾಳಿ ಕೃಷ್ಣನ ಕೂಡೆ |ಹಾಲ ಸುಂಕದ ಕಟ್ಟೆ ಯಾವುದಯ್ಯ ನಿನಗೆ 3

ಎಂದು ನಿಂದಿಸಿ ಹಿಂದೆ ತಿರುಗಿ ಪೋಗಲು | ಕಂಡು |ನಂದಕಂದನು ತಾ | ಸೆರಗ ಪಿಡಿದು ತಾ ನಿಲಿಸೆ ||ಚಂದಿರಮುಖಿ ತಾನು ಸೆಣಸಿ ಕೃಷ್ಣನೊಳ್ ಸೋತುಕಂದಿ ಕುಂದುತ ಕೈಯ ಮುಗಿದು ಪೇಳಿದಳು 4

ತಂದೆ ಸೆರಗ ಬಿಡು ಕಂದ ಸೆರಗ ಬಿಡು |ಇಂದೆನ್ನ ಗುರುವರ್ಯ | ಸೆರಗ ಬಿಡಯ್ಯ ||ತಂದೆಯು ನಾನಲ್ಲ | ಕಂದನಾನಲ್ಲವೊ | ನಿನ್ನ |ತಂದೆಗಳಿಯನೆಂದು ಭಾವಿಸೆ ತರುಣಿ 5

ಮಾವ ಸೆರಗ ಬಿಡು |ಭಾವಸೆರಗ ಬಿಡು |ಸೇವಕಿ ನಿನಗೆ ನಾ ಸೆರಗ ಬಿಡಯ್ಯ ||ಮಾವನಲ್ಲವೊ | ಕೇಳೆ ಭಾವನಲ್ಲವೊ | ನಿನ್ನ ||ಮಾವನ ಮಗನು ನಾ ಕಾಣೆಂದ ಕೃಷ್ಣಾ 6

ವಿಧ ವಿಧದಲಿ ಮಾತನಾಡುತಾ ಕೃಷ್ಣ |ಮದನತಾಪವ ಹೆಚ್ಚಿಸಿದನು ಮಾನಿನಿಗೆ |ಪದುಮಾಕ್ಷಿ ಭ್ರಮೆಗೊಂಡುಮದನತಾಪದಿ ನೊಂದು |ಮದನತಾತನನಪ್ಪಿ | ಮುದ್ದಿಸೆ ಕಂಡು 7

ತಾಳು ತಾಳೆಲೆ ಸಖಿ ತಾಯಿ ತಂಗಿಗೆ ಸಮ |ಕೇಳು ಜಗದಿ ಪರದಾರಾಂಶ ಜನಕೆ ||ಲೋಲಲೋಚನ ಎನ್ನ ಗೋಳು ಗುಡಿಸದೀಗ |ಆಳು ನಿನ್ನಯ ಜನನಿಗೆ ಸೊಸೆ ಎಂದು ದಯದಿ 8

ಇಂತೆಂದು ಕೃಷ್ಣನ ಎದೆಗೆ ಕುಚವನಿತ್ತು |ಸಂತೋಷದಿಂದಲಪ್ಪೀ ಸ್ಮರಿಸುತ್ತಲಿರಲುಕಂತುಜನಕೆ ಗೋವಿಂದಗೆ ದಾಸರೋಳೆಂತು |ಕೃಪೆಯೋ | ನಾರಿಗೊಲಿದಿಷ್ಟ ಸಲಿಸೆ ಗೋಕುಲ 9
********

No comments:

Post a Comment