Monday, 18 November 2019

ಸುರತಟನೀಧರನರಸೀ ಪೊರೆಪಾರ್ವತಿ ದೇವಿಯೇ ankita govinda

by ಗೋವಿಂದದಾಸ
ಸುರತಟನೀಧರನರಸೀ |ಪೊರೆಪಾರ್ವತಿ ದೇವಿಯೇ |ಕರುಣಾಕರೇ ದುರಿತಹರೇ | ಶರಣರ ಸಂಜೀವಿಯೆ 1

ಕಂಕಣಕರೆ ಕುಂಕುಮಧರೆ | ಪಂಕಜದಳ ನೇತ್ರೆಯೆ |ಶಂಕರಿ ಭವಬಿಂಕಹರೇ | ಕಿಂಕರನುತಿ ಪಾತ್ರೆಯೇ 2

ಚಂಡಿಯೆ ಚಾಮುಂಡಿಯೇ | ಪ್ರಚಂಡಿಯೆ ಓಂಕಾರಿಯೆ |ಚಂಡನ ಖಳಮುಂಡನ ಶಿರÀ | ಖಂಡನೆ ಹ್ರೀಂಕಾರಿಯೇ 3

ಜ್ವಾಲಿನಿ ಮಹಮಾಲಿನಿ ದಯೇ | ಶೀಲೆ ನೀ ಶರ್ವಾಣಿಯೆ |ಕಾಳಿನಿ ಮಹಾ ಕಾಳಿನಿರಣ| ಶೂಲಿನೀ ರುದ್ರಾಣಿಯೆ 4

ಸುಂದರಿ ಗುಣಮಂಜರಿ ಪೂರ್ಣೇಂದು ಸಂಕಾಶಿಯೇ |ಚಂದದಿ ಗೋವಿಂದನ ದಾಸ| ವಂದಿತೆ ಅಘನಾಶಿಯೆ 5
*******

No comments:

Post a Comment