Wednesday, 13 November 2019

ಪಾಲಿಸು ಲೋಕನಾಯಕನೆ ಗುಣಶೀಲ ankita govinda

by ಗೋವಿಂದದಾಸ
ಪಾಲಿಸು ಲೋಕನಾಯಕನೆ ಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪ

ನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1

ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2

ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
********

No comments:

Post a Comment