Tuesday 19 November 2019

ಹಲವನು ಯೋಚಿಸಲೇನು ಫಲ ಬರಿ ankita govinda

by ಗೋವಿಂದದಾಸ
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1

ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2

ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3

ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4

ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5
*******

No comments:

Post a Comment