Monday 11 November 2019

ಕೃಷ್ಣನಾಮಾಮೃತ ರುಚಿಕರವೆಲ್ಲವುಶ್ರೇಷ್ಠ ankita govinda

by ಗೋವಿಂದದಾಸ
ಕೃಷ್ಣನಾಮಾಮೃತ ರುಚಿಕರವೆಲ್ಲವುಶ್ರೇಷ್ಠ ಭಕ್ತರಿಗಲ್ಲದೇದುಷ್ಟಮಾನವಮತಿಹೀನಗೆಪೇಳಲು ಇಷ್ಟವಾಗಲು ಬಲ್ಲುದೇ ಪ

ಗುಡಶೈಲದಲಿ ಲಿಂಬೆ ಬೀಜ ಪ್ರತಿಷ್ಠಿಸೆಫಲವು ಮಧುರವಹುದೆ ಗುಡುಗುಮೋಡಕೆ ಮಯೂರವು ಕುಣಿದಂತೆಕುಕ್ಕುಟ ನೋಡಿ ಕುಣಿವುದೆ ಸುಡುವಗ್ನಿಯಲಿಬೀಜಬಿತ್ತಿ ನೀರೆರೆದರೇ ಗಿಡವಾಗಿ ಶೋಭಿಪುದೇಪೊಡವಿಯೊಳಗೆ ಲಕ್ಷ್ಮೀಯೊಡೆಯನಚರಿತೆಯ ಮೂಢಮಾನವಬಲ್ಲನೇ 1

ವೀಣೆಯ ನುಡಿಸುತ್ತ ಗಾಯನ ಹಾಡಲುಕೋಣಗೆ ಹಿತವಹುದೆ ಸಾಣೆಕಲ್ಲನುಬಿಸಿನೀರಿನೊಳಿಟ್ಟರೆ ಮೇಣದಂತಾಗುವುದೇಜಾಣತನದಿ ವೇದ ಓದಿದ ಹೊಲೆಯನುಬ್ರಾಹ್ಮಣನೆನಿಸುವನೆ ಕ್ಷೋಣಿಯೊಳಗೆವಾಸುದೇವನ ಚರಿತೆಯ ಹೀನಮತಿಯು ಬಲ್ಲನೆ 2

ಕೋಗಿಲೆ ಸಾಕಿದ ಕಾಗೆಯ ಮರಿ ತನ್ನ ರಾಗದಿಮೋಹಿಪುದೇ ನಾಗರಹಾವಿಗೆ ಹಾಲೆರೆದರೆನಿತ್ಯವಿಷವ ನೀಗಿಸಿಕೊಂಬುದೇ ಭೋಗದಾಸೆಯಸ್ತ್ರೀಗೆ ವಿಟನ ಮೇಲಲ್ಲದೇ ಯೋಗಿಯೊಳ್ಹಿತವಹುದೇ ಸಾಗರಶಯನ ಗೋವಿಂದನಮಹಿಮೆಯಭೋಗಾಸಕ್ತನು ಬಲ್ಲನೇ 3
*******

No comments:

Post a Comment