Monday, 18 November 2019

ಹರಿನಾಮವೆ ಜಯ ಮಂಗಳವು ankita govinda

by ಗೋವಿಂದದಾಸ
ಹರಿನಾಮವೆ ಜಯ ಮಂಗಳವು |ಶ್ರೀ ಹರಿನಾಮವೆಶುಭಮಂಗಳವು ||ಹರಿನಾಮವ ದಿನ ಸ್ಮರಿಸುವ ಸುಜನರ-ದುರಿತರಾಶಿಗಳೆಲ್ಲ ತರಿಯುವಮಾಧವ1

ಉರಗಶಯನವರಪರಮೇಶನಸಖ|ಗರುಡಗಮನಸಿರಿಯರಸನೆಂದೆನಿಸಿದಹರಿ2

ನಾರದಮುನಿ ಹರಿನಾರಾಯಣನೆಂದು |ಭಾರಿ ಭಜನೆ ಗೈವ | ಮಾರಜನಕನೆಂಬಹರಿ3

ಅಜಾಮಿಳನಂತ್ಯದಿ | ಭುಜಗಶಯನನೆಂದು |ಭಜಿಸಲು ಸಲಹಿದವಿಜಯಸಾರಥಿಯಾದಹರಿ4

ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು |ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ5

ಶೇಷಗಿರಿಯ ಮೇಲೆ ವಾಸವಾಗಿರುತಿಹ |ದಾಸ ಜನರ ಪ್ರಿಯ | ದೋಷರಹಿತನೆಂಬ6

ವೃಂದಾವನದೊಳಾ | ನಂದದೊಳಾಡುವ |ಸುಂದರಕರಗೋವಿಂದನೆಂದಿನಿಸಿದಹರಿ7
*******

No comments:

Post a Comment