Thursday, 14 November 2019

ಬಾರೋ ಬಾ ಮನೆಗೇ ankita govinda

by ಗೋವಿಂದದಾಸ
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪ

ಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪ

ನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1

ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2

ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3

ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4

ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
*******

No comments:

Post a Comment