Friday, 8 November 2019

ಶ್ರೀಹರಿ ಲಕ್ಷ್ಮಿಯರುಅಂಗಳದೊಳಗಾಡೋ ರಂಗ ankita govinda

by ಗೋವಿಂದದಾಸ
ಶ್ರೀ ಹರಿ ಲಕ್ಷ್ಮಿಯರುಅಂಗಳದೊಳಗಾಡೋ ರಂಗಪ

ರಹೆಂಗಳ ಮನೆಗ್ಹೋಗ ಬ್ಯಾಡೋ ನೀಲಾಂಗ ಪದಧಿಘೃತಚೋರನೆನ್ನುವರು ನಿನ್ನಬೆದರಿಸಿ ಜರೆವರು ಪದುಮನೇತ್ರೆಯರುವಿಧವಿಧದಲಿ ಬಾಧಿಸುವರು ಕೊರಳಪದಕದ ಸರವನ್ನು ಸೆಳೆದುಕೊಳ್ಳುವರು 1

ಕಿರುಕುಳ ....ನಿನ್ನ ಮನಕರಕರಿಸುವದೆನಗಿನಿತು ಕೇಳಣ್ಣಕರುಗಳ ಬಿಡ ಹೇಳಿ ಮುನ್ನಾ ಬಲುಹಗರಣಗೈಯ್ಯುವರೆನ್ನಾ ಸಂಪನ್ನಾ 2

ನುಡಿಯಲಾಲಿಸುಮುದ್ದು ಕಂದಾ ನಿನ-ಗಿಡುವೆನಕ್ಷತೆ ವಸ್ತ್ರಾಭರಣ ಸುಗಂಧಾಕೊಡುವೆನುದಧಿಘೃತದಿಂದಾ ಕಾೈದಕಡಬು ಕಜ್ಜಾಯ ಅತಿರಸವಾ ಗೋವಿಂದಾ 3
*********

No comments:

Post a Comment