Saturday, 16 November 2019

ಇಂದೀಗ ಹರಿದಿನವು ಏಕಾದಶಿಯೆಂದು ankita govinda

by ಗೋವಿಂದದಾಸ
ಲೋಕನೀತಿ
ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವು ಪ 

ಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪ

ಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1

ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2

ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3

ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4

ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5

ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6
*******

No comments:

Post a Comment