Friday, 27 December 2019

ಬೆನಕ ಬೆನಕ ಏಕದಂತ ಪಚ್ಚಕಲ್ಲು ಪಾಣಿಪೀಠ others

ಬೆನಕ ಬೆನಕ ಏಕದಂತ ಪಚ್ಚಕಲ್ಲು ಪಾಣಿಪೀಠ
ಮುತ್ತಿನುಂಡೆ ಹೊನ್ನಗಂಟೆ
ಒಪ್ಪುವಾ ಪುಟ್ಟಬೆಟ್ಟದಲಿ‌ ತಂಬಿಟ್ಟು ಮುಕ್ಕುವ ಪುಟ್ಟ 
ವಿಘ್ನೇಶ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು.

ಬೆಳಗಾಯಿತು ಏಳೋ
ಏ ಮುದ್ದು ಬೆನಕಾ
ಭುವಿಯೆಲ್ಲಾ ರಂಗಾಯ್ತು
ನೀ ಏಳೋ ಬೆನಕಾ
                ||ಬೆಳಗಾಯಿತು||

ಅಂಬಾಪ್ರಿಯಾತನಯಾ
ಆದಿಪೂಜಿತನೇ
ಮೂಡಣದೆ ರವಿ ಎದ್ದ
ನೀ ಏಳೋ ಬೆನಕಾ
                ||ಬೆಳಗಾಯಿತು||

ಮಾಮರದಿ ಕೋಗಿಲೆಯು
ಪಚ್ಚವರ್ಣದ ಗಿಳಿಯು
ಸುಪ್ರಭಾತವ ನಿನಗೆ
ಹಾಡುತಿವೆ ಬೆನಕಾ
ಆ ನಿನ್ನ ಸುಂಡಿಲಿಯು
ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ
ಕುಳಿತಿಹುದು ಬೆನಕಾ
    ‌‌‌‌            ||ಬೆಳಗಾಯಿತು||

ಹುಲ್ಲುಗರಿಕೆಯು ದೂರ್ವೆ ಆದಿಕಾದಿಪುದು
ಪೂಜೆಯಲಿ ನಿನ್ನ‌ ಅಲಂಕರಿಸಲೆಂದು
ನಾಗಲಿಂಗದ ಪುಷ್ಪ ಕಮಲಗಳು
ಕಾದಿಹವು ಗಣಪತಿಯ ಅರ್ಚನೆಗೆ ಸಿದ್ದವಾಗಿಹೆವೆಂದು
   ‌‌‌                  ||ಬೆಳಗಾಯಿತು||

ನಿನಗಾಗಿ ಮಾಡಿಟ್ಟ ತಂಬಿಟ್ಟು 
ಚಕ್ಕುಲಿ ಕಾಯುತಿವೆ ನಿನ್ನ
ಸ್ವೀಕಾರಕಾಗಿ ನಿನ್ನ ಪೂಜೆಯ 
ಮಾಡೆ ಭಕ್ತಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ

‌‌‌‌‌‌                      ||ಬೆಳಗಾಯಿತು||
********

No comments:

Post a Comment