Tuesday, 3 December 2019

ಏನು ಬೇಡಲಿ ಹರಿಯ ಜಾಹ್ನವೀಜನಕನ purandara vittala

ರಾಗ ಶಂಕರಾಭರಣ. ಅಟ ತಾಳ

ಏನು ಬೇಡಲಿ ಹರಿಯ ||ಪ||

ಜಾಹ್ನವೀಜನಕನ ಕಂದರ್ಪನಯ್ಯನ ||ಅ.ಪ||

ಏನು ಬೇಡಲಿ ಚಿತ್ತ ಚಂಚಲ ಕಠಿನನ
ಮೌನದಿಂದಲಿ ಧರೆ ಕೋರೆಲೆತ್ತಿದನ, ಇಂಥವನ ||

ಕರುಳಹಾರದವನ ಧರಣಿಯನು ಮೆಟ್ಟಿ
ಈರಡಿ ಮಾಡಿದ ಕೊಲೆಗಡುಕನ, ಇಂಥವನ ||

ಅರಣ್ಯದಿ ಚರಿಸಿ ಸತಿಯ ಕಳೆದನ
ತಿರುಗಿ ಮನೆ ಮನೆಯ ಬೆಣ್ಣೆ ಮೆಲ್ಲುವನ, ಇಂಥವನ ||

ವಸನ ಶೂನ್ಯನಾಗಿ ಕಲ್ಕಿ ಏರಿದನ
ಕಾಸು ಕಟ್ಟಿಟ್ಟು ಕೇಸಕ್ಕಿ ಉಂಬುವನ, ಇಂಥವನ ||

ಹಯವ ಪಿಡಿದು ಗಾಡಿಗಾರನಾಗಿಪ್ಪನ
ಭಯದಿಂದ ಬಲಿಯ ಬಾಗಿಲ ಕಾಯಿದವನ, ಇಂಥವನ ||

ಪುರವ ಜರಾಸಂಧನಿಗಂಜಿ ಬಿಟ್ಟವನ
ನೆರೆ ಸಾಧಿಸಿ ಮಾವನ ಶಿರವ ತರಿದನ, ಇಂಥವನ ||

ಜಗನ್ನಾಥ ಪುರಂದರ ವಿಠಲರಾಯನ
ಭಕುತರಿಗೆ ಚತುರ್ಮುಕ್ತಿ ಕೊಡುವನ, ಇಂಥವನ |
***


pallavi

Enu bEDali hariya

anupallavi

jAnhavI janakana kandarpanayyana

caraNam 1

Enu bEDali citta cancala kaTHinana maunadindali dhare kOrelettidana inthavana

caraNam 2

karuLahAradavana dharaNiyanu meTTi IraDi mADida kolegaDukana inthavana

caraNam 3

araNyadi sarisi satiya kaLedana tirugi mane maneya beNNe melluvana inthavana

caraNam 4

vasana shanyanAgi kalki Eridana kAsu kaTTiTTu kEsakki umbuvana inthavana

caraNam 5

hayava piDidu gADigAranAgippana bhayadinda baliya bAgila kAyidavana inthavana

caraNam 6

purava jarAsandhaniganji biTTavana nere sAdhisi shirava taridana inthavana

caraNam 7

jagannAtha purandara viTTalarAyana bhakutarige caturmukti koDuvana inthavana
***

No comments:

Post a Comment