Friday, 27 December 2019

ಇಳಿದು ಬಾ ಅಮ್ಮಾ ಇಳಿದು ಬಾ others

yes

ಇಳಿದು ಬಾ.. ಅಮ್ಮಾ..ಇಳಿದು ಬಾ..
ಪಾಲ್ಗಡಲ ಊರಿಂದ, ಶ್ರೀಹರಿಯ ಹೃದಯದಿಂದ, 
ವೈಕುಂಟದರಷಿ ಭಕ್ತರ ಭಾಗ್ಯವಾಗಿ..ಇಳಿದು ಬಾ..
ಇಳಿದು ಬಾ..ಇಳಿದು ಬಾ....ಅ..

ಇಳಿದು ಬಾ ಲಕುಮಿ ಇಳಿದು ಬಾ ಇಳಿದು ಬಾ,
ಅಮ್ಮ ಇಳಿದು ಬಾ ವೈಕುಂಠದ ಊರಿಂದ ಇಳಿದು ಬಾ,
ಭಕ್ತರ ಭಾಗ್ಯವಾಗಿ ಧರೆಗೆ ಬಾ,
ಹರಿಯ ವೃಕ್ಷದಿಂದ ದೇವಿ ಇಳಿದು ಬಾ,
ಗೆಜ್ಜೆ ಕಾಲ ಸದ್ದಮಾಡಿ ಬಾರೆ ಬಾ,
ಭುವಿಯ ಬರವ ತಿರಿಸಲು ಅಮ್ಮ ಬಾ,
ಅಷ್ಟ ಬಾಗ್ಯ ವರದಿ ಲಕುಮಿ ಬಾ ಬಾರೇ ಬಾ...
               Il ಇಳಿದು ಬಾ ಲಕುಮಿ ll
               Il ಇಳಿದು ಬಾ ಅಮ್ಮ ll

ಕಷ್ಟಗಳ ಸುಳಿಯಿಂದ ಕಾಪಾಡಮ್ಮ, 
ನೋವಿನ ಮಡುವಿನಿಂದ ಪಾರು ಮಾಡಮ್ಮ,
ವಿದ್ಯಾಲಕ್ಷ್ಮಿ ಯಾಗಿ ಅರಿವ ನೀಡು ಬಾರಮ್ಮ..
ಧನಲಕ್ಷ್ಮಿ ದೇವಿಯಾಗಿ ಸಿರಿ ನೀಡಮ್ಮ ,
ಗ್ರಹತಾರೆಗಳ ಒಡವೆ ಧರಿಸಿದ ಅಮ್ಮ, 
ಬ್ರಹ್ಮಾಂಡದ ಉದರದಲ್ಲಿ ಹೊತ್ತಿಹ ಅಮ್ಮ, 
ಹರಿ ರಾಣಿ ಶುಭ ಪಾದ ಇರಿಸಿ ಬಾರಮ್ಮ,
ಹರಸುತಲೀ  ಹರುಷವನ್ನು ನೀಡೇ ಅಮ್ಮ..
               Il ಇಳಿದು ಬಾ ಲಕುಮಿ ll
               Il ಇಳಿದು ಬಾ ಅಮ್ಮ ll

ಚಂದ್ರನ ಸಹೋದರಿಯೇ ಇಳಿದು ಬಾ,
ದಾಸ ಸಂತ ಪೂಜಿತಳೇ  ನಲಿದು ಬಾ,
ಸಂತಾನದ ಲಕ್ಷ್ಮಿ ನಮ್ಮ ಮನೆಗೆ ಬಾ, 
ಮಗುವಾಗಿ ಮನೆಯಲಾಡಿ ನಲಿಸು ಬಾ,  
ನೊಂದು ಬಂದ ಜನರ ದುರಿತ ನೀಗು ಬಾ, 
ಬೇಡಿಬಂದ ಜನರ ಬೆಳಗು ಬಾ, 
ಧಾನ್ಯ ಲಕ್ಚ್ಮಿ ಯಾಗಿ ಧರೆಗೆ ಇಳಿದು ಬಾ, 
ಹಸಿದವರ ಹೊಟ್ಟೆಯಲ್ಲಿ ತೃಪ್ತಿ ನೀಡು ಬಾ..

ಇಳಿದು ಬಾ ತಾಯೇ....ಇಳಿದು ಬಾ ಅಮ್ಮಾ ಇಳಿದು ಬಾ....

ನೊಂದು ಬೆಂದಿಹ ಮನಗಳ ತಣಿಸಿ 
ಹರುಷದ ಹೊನಲಅ ತಾರಮ್ಮ...
ಹರುಷದ ಹೊನಲಅ ತಾರಮ್ಮ... ll 2 ll

ಅಷ್ಟ ಭಾಗ್ಯದ ಇಷ್ಟ ಲಕ್ಷ್ಮಿಯೇ  
ಆದಿಲಕ್ಷ್ಮಿಯೇ ದಯೆ ತೋರಮ್ಮ ll 2 ll

ಸಾಗರ ಮತಿಸೇ ಅಮೃತ ಕಲಶವ  
ತಂದ ಸಿರಿಯೇ  ಬಾರಮ್ಮ ll 2 ll

ಶ್ರೀ ಲಕುಮಾಮ್ಮ....  ವರ ಲಕುಮಮ್ಮಾ....  
ಇಳಿದು ಬಾರಮ್ಮ....ಅ.....
******

No comments:

Post a Comment