Thursday, 17 October 2019

ಶರಣು ಗಿರಿಯ ತಿಮ್ಮಾ ಶರಣು ಪುರುಷೋತ್ತಮಾ ankita vijaya vittala

ವಿಜಯದಾಸ
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ |
ಶರಣು ಮಹಾ ಮಹಿಮ | ಶರಣು ಪರಬೊಮ್ಮಾ |
ಪರಿಹರಿಸುವದು ಹಮ್ಮಾ ಪ

ವರೇಣ್ಯ |
ಭಂಗ | ಹರಿಸಿದ ಶಿರಿ ರಂಗ |
ವಿಹಂಗ | ತುರಗ ತುರಗ ವದನ |
ಸದನ ಕರ ಮುಗಿವೆನೈಯಾ |
ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1

ಪಾದದಲಿ ಪೆಣ್ಣಾ |
ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ |
ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ |
ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು |
ಯಾದುದೆ ಇತ್ತ ನೋಡು 2

ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ |
ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ |
ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ |
ಜಾರ ಚೋರ | ಅಳಿದೆ ಮುಪ್ಪುರು ಶೂರಾ |
ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
*********

No comments:

Post a Comment