Wednesday 16 October 2019

ಪತಿತಪಾವನ ನಾಮ ಪೂರ್ಣಕಾಮಾ ಗತಿಯ ಪಾಲಿಸೊ ankita vijaya vittala

ವಿಜಯದಾಸ
ಪತಿತಪಾವನ ನಾಮ ಪೂರ್ಣಕಾಮಾ |
ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ

ಹದಿನಾರು ಸಾವಿರ ಸುದತಿಯರೆಲ್ಲರು |
ತ್ರಿದಶವಿರೋಧಿಯ ಸದನದಲ್ಲಿ ||
ಮದದಿಂದ ಸೆರೆಬಿದ್ದು ಹದುಳ ಕಾಣದೆ |
ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ1

ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ |
ಕಾರ್ತರಥವನೇರಿ ಕೀರ್ತಿಪುರುಷಾ ||
ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ |
ತೀರ್ಥಧರಾದಿಗಳು ನರ್ತನದಲಿ ಪೊಗಳೆ 2

ಇಂದುಮುಖಿಯರ ಬಂಧನ ತರಿದವರು |
ಅಂದು ಉತ್ಸಾಹದಿಂದ ದ್ವಾರಾವತಿಗೆ ||
ಮಜ್ಜನ ಮಾಡೆ |
ಮಂದಾರ ಮಳೆ ನಭದಿಂದ ಸುರಿಯೆ 3

ದೇವ ಶೃಂಗಾರವಾಗೆ ವೇದಾದಿಗಳು ನಿಂದು |
ತಾವೆಲ್ಲ ಮಣಿಭೂಷಣಾವಳಿಯಿಟ್ಟು ||
ನೋವ ಪೋಗಾಡಿಸಿ ಪಾವನರಾಗಿ ಸುಖ- |
ವನಧಿಯೊಳು ಮೀಯುತ್ತ ಕೊಂಡಾಡೆ 4

ನರಕಾಸುರನ ಕೊಂದು ಇರಳು ಈ ಪರಿಯಲ್ಲಿ |
ಹರಿಮಾಡಿದ ಚರಿತೆ ತಿಳಿದುದನು- ||
ಚ್ಚರಿಸಿದವನ ಕುಲ ನರಕದಿಂದುದ್ಧಾರ |
ಮೊರೆಹೊಕ್ಕೆ ಇದÀಕೇಳಿ ವಿಜಯವಿಠ್ಠಲರೇಯಾ 5
***

pallavi

patita pAvana nAma pUrNakAmA gatiya pAlisO enage guru sArvabhaumA

caraNam 1

hadinAru sAvira sudatiyerellaru tridasha virOdhiya sadanadalli
madadinda serediddu haduLa kANade stutisidaru manadi nAradaninda nalidADi

caraNam 2

kArtika mAsadali kAnteya oDagUDi kArtha rathavanEri kIrti puruSA
dhUrtana kondu bAleyarArthava pariharise tIrthadharAdigaLu narthanadali pogaLE

caraNam 3

indumukhiyara bandhana taridavaru andu utsAhadinda dvArAvatge
bandu abhyangadalinda majjane mADe mandAramaLe nabhadinda suriye

caraNam 4

dEva shrngAravAge vEdAdigaLu nindu tAvella maNI bhUSaNAvaLi iTTu
nOva pOGADisi pAvanarAgi sukha vanadhiyoLu mIyutta koNDADe

caraNam 5

narakAsurana kondu iruLu Ipariyelli hari mADide carite tiLidudanuc-
carisidavana pula narakadinduddhAra more hokke ida kELi vijayaviThalarEya
***


No comments:

Post a Comment