Monday 6 September 2021

ಕೃಷ್ಣಾರ್ಪಿತವೆಂದು ಕೊಡುಲು ಎಳ್ಳಷ್ಟಾದರೂ ankita vijaya vittala KRISHNARPITAVENDU KODALU ELLESHTADARU



ಕೃಷ್ಣಾರ್ಪಿತವೆಂದು ಕೊಡುಲು ಎ-|
ಳ್ಳಷ್ಟಾದರೂ ಮೇರು ಪರ್ವತ ಮೀರುವದು ಪ

ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ಅ-
ರಣ್ಯದಲಿ ಪಾಂಡವರು ಇರಲು ಬಂದು ||
ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- |
ರುಣ್ಯದಲಿ ಹರಿ ಎನಲು ಅಪರಿಮಿತವಾದುದು 1

ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ |
ಮಣಿ ವಿದುರನ ಮನೆಯಲ್ಲಿ ||
ಹಸ್ತು ಬಂದುದಕೆ ಉಪಾಯವೇನೆಂದೆನಲು |
ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ2

ಅಣು ಮಹತ್ತಾಗಲಿ ಆವಾವ ಕರ್ಮಗಳು |
ತೃಣನಾದರರಿತು ಅರಿಯದೆ ಮಾಡಲು ||
ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ |
ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ 3
***

pallavi

krSNArpitavendu koDalu eLLaSTAdaru mEru parvata mIruvadu

caraNam 1

gaNyavillade siyssahita hararUpa muni araNyadalli pANDavaru iralu bandu
puNya bEkendanallu ondu daLa shAkA kAruNyadali hariyenelu aparimita vAdudu

caraNam 2

hastinApuradalli sakala dEvAdigaLa mastakada maNi vidurana maneyalli
hastu bandudake upAyavEnendenalu hastadoLu pAlguDatiyeriye migilAdudO

caraNam 3

anaumahattAgali avAva karmagaLu traNandaravitu ariyade mADalu
kSana tannadennade arpitane nikSEpa guNanidhi vijayaviThalana puradalli
***


No comments:

Post a Comment