Wednesday 16 October 2019

ಊಟವನು ಮಾಡು ಬಾ ಉದಧಿಶಯನಾ ankita vijaya vittala

ವಿಜಯದಾಸ
ಊಟವನು ಮಾಡು ಬಾ ಉದಧಿಶಯನಾ |
ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ

ಪರಿ |
ತೋಯ ಸಂಡಿಗೆ ಪಳದೆ ಹುಳಿ ಸಾರು ||
ಪಾಯಸ ನೊರೆಹಾಲು ಸಕ್ಕರೆಗೂಡಿಸಿ |
ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1

ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ |
ಸಲೆ ಶಾಲ್ಯೋದನ ಕರಿದ ಭಕ್ಷ್ಯಾ ||
ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ |
ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2

ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-|
ರಸ ದೋಸೆ ಬೆಣ್ಣೆ ಸೂಸಲುಕಡಬು ||
ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ
ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3

ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ |
ಮಾಧುರ್ಯವಾಗಿದ್ದ ಜೇನು ಘೃತವು ||
ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು |
ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4

ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ |
ಸರಸವಾಗಿದ್ದ ಚಿತ್ರಾನ್ನಂಗಳು ||
ಪರಿ ಫಲ ಪಕ್ವಾನ್ನ ಸೋಪಚಾರದಿ |
ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5

ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ |
ವಾರುಣದಿ ಉಪ್ಪಿನಕಾಯಿ ಕೂಟಾ ||
ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ |
ಭಾರತೀದೇವಿ ಎಡೆಮಾಡಿದಳೊ ತಂದು 6

ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು |
ಕೊಂಡು ಬಂದ ಗಂಧ ತಾಂಬೂಲವ ||
ಸಿರಿ ವಿಜಯವಿಠ್ಠಲ |
ಕೊಂಡನಾದ ಪುರಂದರಗೆ ಒಲಿದು ಒಲಿದು 7
***

pallavi

Utavanu mADu bA udadhishayana Atavanu sAku mADi ati vEgadindali

caraNam 1

kAyi palle ondendu nUrupari tOyasaNDige paLede huLisAru
pAyasa norehAlu sakkare gUDisi tAyi dEvakiyu eDeya mADidaLu tandu

caraNam 2

yAlakki hAkida hOLigeyu parimaLa sale sAlyOdana karida bhakSA
mElAda ingu jIrigE meNasina huggi shrI lakumi dEvi eDe mADidaLu tandu

caraNam 3

kasakasi eLLu laDDigeyu appAlu ati rasadOse beNNe sUsalu gaDabu
hosanAgi karida happaLa saNDige ninna sose sarasvati eDe mADidaLu tandu

caraNam 4

sAdAkaLa tuppa aLagaLaga tiLi tuppa mAdhuryavAgidda jEnu ghratavu
kAdArida pAlu kaTTu suru kenemosaru bhUdEvi nalinaildu eDe mADidaLO tandu

caraNam 5

saraLige gauli baTave paraDi saggige sarasavAgidda citrAnnangaLu
paripari phala pakvAnna sOpacAradi girijAdigaLu tAvu eDe mADidarO tandu

caraNam 6

khAruLLa paccaDi haccage hasiru varNage vAruNdai uppina kAyi kUTA
nIru majjige nimbe haNNane hiNDi bhAratdEvi eDE mADidaLO tandu

caraNam 7

uNDa taruvAyadali harye pIThadi kuLitu koNDu banda gandha tAmbUlava
koNDu rakSisi enna siri vijayaviThala toNDanAda purandarage olidante olidu
***


No comments:

Post a Comment