Thursday 17 October 2019

ಎಂತಹದೋ ನಿನ್ನ ಸಂದುರಶನಾ ಕಂತುವಿನ ankita vijaya vittala

ವಿಜಯದಾಸ
ಎಂತಹದೋ ನಿನ್ನ ಸಂದುರಶನಾ |
ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ

ಓದನ ತಿಂದೆ |
ಪರರ ದ್ರವ್ಯದ ತಂದೆ |
ಪರ ಸತಿಯರಿಗೆ ನೊಂದೆ |
ಗುರು ಹಿರಿಯರ ನಿಂದೆ |
ಹಿರದಾಗಾಡಿದೆ ಮುಂದೆ |
ಬರುತಿಪ್ಪ ಪಾಪದಿಂದೆ |
ಪರಿಯಾಗಿ ಈ ಬಂದೆ |
ಅರುಹು ತೊರದೆ ಬಂದೆ |
ಕರುಣಿಸು ಜಗದ ತಂದೆ 1

ಸುಜನರ ಗುಣವ ಹಳಿದೆ |
ಕುಜನರ ಸಂಗದಲಿ ಬೆಳಿದೆ |
ಭಜನೆಗೆÀಟ್ಟು ಸುಳಿದೆ |
ಪ್ರಜರನು ಪೊಗಳಿದೆ |
ವೃಜ ಪುಣ್ಯಕೋಶ ಕಳಿದೆ |
ಋಜುಮಾರ್ಗವ ತೊರದುಳಿದೆ |
ರಜನಿಚರ ಮತಿಗಳಿದೆ |
ವಿಜಯ ವಾರ್ತೆಗೆ ಮುಳಿದೆ |
ತ್ರಿಜಗಪತಿ ಕೇಳಿದೆ 2

ಹರಿವಾಸರವ ಬಿಟ್ಟೆ |
ದುರುಳರಿಗೆ ಧನ ಕೊಟ್ಟೆ |
ಹರಿಭಕ್ತರ ತೊರೆದು ಕೆಟ್ಟೆ |
ಹರಿಶ್ರವಣ ಬಚ್ಚಿಟ್ಟೆ |
ಪರಮ ವ್ರತವ ಮೆಟ್ಟೆ |
ಹರುಷದಲ್ಲಿಗೆ ಮನಮುಟ್ಟಿ |
ಬಟ್ಟೆ |
ವಿರಕುತಿಯನು ಬಿಟ್ಟೆ |
ದುರಿತಕ್ಕೆ ಗುರುತಿಟ್ಟೆ |
ಬಟ್ಟೆ 3

ಜ್ಞಾನವೆಂಬೋದೇ ಇಲ್ಲಾ |
ಏನು ಪೇಳಲಿ ಸೊಲ್ಲಾ |
ನೀನೆಂಬೋದಿಲ್ಲವಲ್ಲಾ |
ಹಾನಿ ವೃದ್ದಿಗಳೆಲ್ಲಾ |
ನಾನುಂಟೆ ಎಲ್ಲ ಸಲ್ಲಾ |
ದಾನಾದೆ ಸತತ ಖುಲ್ಲಾ |
ತಾ ನುಡಿಗೆ ಸೋತು ಚಿಲ್ಲಿ |
ರಾನಡತಿ ಸಿರಿನಲ್ಲಾ |
ನಾ ನಡದೆ ನೀ ಬಲ್ಲಾ |
ದೇ ನೋಡು ಪ್ರತಿ ಮಲ್ಲಾ 4

ಅಪರಾಧಿ ನಾನಯ್ಯ |
ಅಪವಾದದವನಯ್ಯ |
ಕೃಪಣದಿಂದೆನ್ನ ಕಾಯಾ |
ಉಪಜಯವಾಯಿತು ಪ್ರೀಯಾ |
ಸ್ವಪನದಿ ಪುಣ್ಯ ಸಹಾಯಾ |
ಲಪಮಾಡಲಿಲ್ಲ ಜೀಯಾ |
ಕೃಪೆಯಲ್ಲಿ ಪಿಡಿ ಕೈಯಾ |
ವಿಜಯವಿಠ್ಠಲರೇಯಾ |
ಗುಪುತವಾದುದುಪಾಯಾ |
ತಪಸಿಗಳ ಮನೋಜಯಾ 5
**********

No comments:

Post a Comment