Wednesday 16 October 2019

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ ankita vijaya vittala

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನಿತ್ಯ ಕಲ್ಯಾಣಿ ಪ

ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ 1

ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಕ್ಲೇಶ ಶೋಕ ವಿನಾಶ 2

ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ 3

ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ಕ್ತರನು ಮಾಡಿ ಪೊರದೇ 4

ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಸತಿ ಪೊಗಳಲು
ಸಿರಿ ವಿಜಯವಿಠ್ಠಲ ಕಾಣಿಸಿದಿಯಾ5
***

jaya kRuShNavENi durjanara ganTalagANi
nI tamataguNa SrENi nitya kalyANi ||pa||

harajaDiyali janisi haripAda jalavenisi
muraharana varNa pesaravanE pottu
dhareyoLage mahAbaLESvaradalli neleyAgi
poride SaraNAgatara duritagaLa taride ||1||

dOSharahitAthereyoLu sAsira BAgadali
A salila biMdu pavamAna bandU
bIsidA samayadali jIvarAsiya mEle
sUsi bILalu klESa SOka vinASa ||2||

aShTArthamAsa kRuShNapakSha caturdaSi
kRuShNavAra viShNu tAreyallI
kRuShNakRuShNA endu niShTheyindali mana
muTTi snAnava mADe kaShTa pariharipa ||3||

sUrapAli kapaTa sangamaCAyA
SrI Saila vara catusthAnagaLali vAsamADi iralu
vAraNASiya Palagaredu jIvanmu
ktaranu mADi poradE ||4||

kaliyugadi kRuShNA snAna kRuShNa smaraNi ve
ggaLaveMdu ajana sati pogaLalu
jalanidhiya uBayamuKadali kUDi
Baktarige^^olidu siri vijayaviThThala kANisidiyA||5||
***

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ||pa||

ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ ||1||

ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ||2||

ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ ||3||

ಸೂರಪಾಲಿ ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ವಾರಣಾಶಿಯ ಫಲಗರೆದು ಜೀವನ್ಮು
ಕ್ತರನು ಮಾಡಿ ಪೊರದೇ ||4||

ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಗ್ಗಳವೆಂದು ಅಜನ ಸತಿ ಪೊಗಳಲು
ಜಲನಿಧಿಯ ಉಭಯಮುಖದಲಿ ಕೂಡಿ
ಭಕ್ತರಿಗೆಒಲಿದು ಸಿರಿ ವಿಜಯವಿಠ್ಠಲ ಕಾಣಿಸಿದಿಯಾ||5||
***


No comments:

Post a Comment