Wednesday 16 October 2019

ನೋಡಿದ್ಯ ರಂಗೈಯನ ನೋಡಿದ್ಯ ankita vijaya vittala

ವಿಜಯದಾಸ
ನೋಡಿದ್ಯ ರಂಗೈಯನ ನೋಡಿದ್ಯ ಪ

ನೋಡಿದ್ಯ ಮನವೆ ನೀನಿಂದು ಕೊಂ-
ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ-
ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು
ಕೂಡಿ ನಲಿನಲಿದಾಡುವ ಶ್ರೀ ರೂಪ ಅ.ಪ.

ಚರಣತಳದಲ್ಲಿ ಕೆಂಪು- ಶುದ್ದ
ಅರವಿಂದ ಧ್ವಜ ವಜ್ರಸೊಂಪು- ಸ್ತುತಿ
ಪÀರಿಗೆ ಸುರಂಘ್ರಿಪ ತಂಪು- ನೋಡ-
ಲರಸಿ ಕಾಣದೊ ವೇದಗುಂಪು, ಆಹ
ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ
ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ1

ಸರಸ ನೂಪುರ ಗೆಜ್ಜೆ ಪೆಂಡ್ಯ - ಹೊನ್ನ
ಸರಪಳಿ ಪಾಡಗ ಕಂಡ್ಯ - ಹಿಂದೆ
ಧರೆಗೆ ಮುಟ್ಟಿದ ಜಡೆಗೊಂಡ್ಯ - ಇದು
ತರುಣಿ ಎನ್ನದಿರು ಕಂಡ್ಯ - ಆಹ
ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ
ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ2

ಝಣ ಝಣ ಗೆಜ್ಜೆನಾದ - ವನ್ನು
ಎಣಿಸಲಾರದು ನೋಡಿ ವೇದಾ - ನಂತ -
ಮೋದ - ಇದು
ಅಣುರೇಣು ತೃಣಕಾಷ್ಠ ಭೇದ, ಆಹ
ಪ್ರಣತಾರ್ತಿ ಹರವಾದ ಮಿನುಗುವ ಜಾನುದ -
ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ 3

ಊರುದ್ವಯಂಗಳು ರಂಭಾ - ಸ್ತಂಭ
ಚಾರು ಪೊಕ್ಕುಳ ಸುಳಿಗುಂಭ - ತಂತ್ರಾ -
ಸಾರೋಕ್ತದಿ ಪೂಜೆಗೊಂಬ - ವಿ
ಸ್ತಾರ ಮಹಿಮೆ ಗುಣತುಂಬ, ಆಹ
ನಾರಿ ಲಾವಣ್ಯದ ಪಾರ ಮೀರಿದ ಕಾಂತಿ
ಆರಾರ ಮನಸಿಗೆ ತೋರದ ಪೆಣ್ಣಿನ4

ಉದಯರಾಗದ ದಿವ್ಯವಸನ - ಮೇಲೆ
ಉದರ ತ್ರಿವಳಿ ಬಂದಿ ಹಸನ - ಕೇಳು
ಮುದದಿಂದ ವಡ್ಯಾಣ ಬೆಸನ - ನೋಡು
ಯದುಕುಲ ಜಾತ ಮಾನಿಸನ, ಆಹ
ಮದಕರಿಯಂದದಿ ವಲಿದೊಲಿದಾಡಲು
ಮದನಾರಿ ಮರುಳಾದ ಅದುಭುತ ಚರಿಯನ್ನ 5

ದೋರ್ಯ ಹರಡಿ ಕೈಕಟ್ಟು - ಚೂಡ್ಯ
ಈರೈದುಂಗುರವುಳ್ಳ ಬೆಟ್ಟು - ಬಂ -
ಗೀರು ಗಂಧವು ಗಂಬೂರ ಕರ್ಪೂರ ಕ-
ಸ್ತೂರಿ ಲೇಪನ ಶೃಂಗಾರ ತ್ರಿವಳಿಯ 6

ತಾಯಿತು ಮುತ್ತ ಕಟ್ಟಾಣಿ - ತೋಳ
ಮಣಿ - ವಂಕಿ
ಕೇಯೂರ ಪಲ್ಲವ ಪಾಣಿ - ಉ
ಪಾಯದಲ್ಲಿ ಘಟ್ಟಿ ಕಾಣಿ, ಆಹ
ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ-
ತೇಯರ ಮಡುಹಿದ ಮಾಯದ ಕನ್ನಿಕೆ 7

ಸರಿಗೆ ಮುತ್ತಿನ ಚಿಂತಾಕ - ಕುಚ-
ಕಂಚುಕ - ತೊಟ್ಟ
ಭರದಿ ತೂಗುವ ಪಚ್ಚೆಪದಕ - ಕೆಳಗೆ
ಹರಿ ನಡುಕಿಂಕಿಣಿ ಕನಕ, ಆಹ
ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ
ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು 8

ರನ್ನ ಪವಳ ಸರ ಥಳಕು - ಜೋಡು
ಕನ್ನಡಿ ಹಾಕಿದ ಮಲಕು - ನೋಡು
ಅನ್ನಂತ ಸೂರ್ಯರ ಝಳಕು - ಲೋಕ
ಚನ್ನಾಗಿ ತುಂಬಿದ ಬೆಳಕು
ಹೇಮ ಸಣ್ಣ ಮುತ್ತಿನ ಮೋ
ಹನ್ನ ಏಕಾವಳಿ ಚಿನ್ನದ ಸರಗಳು 9

ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ
ವೈಜಯಂತಿ ಮಂದಾರ - ಮೇಲೆ
ತರುಣ ತುಲಸಿ ಜನಿವಾರ - ಇಟ್ಟು
ವರಭುಜಕೀರ್ತಿ ಕುಂಜರ, ಆಹ
ಕರದಂತೆರಡು ತೋಳು ಎರಡೊಂದಾರು ಸಾ-
ವಿರ ರೂಪನಾಗಿ ಶರೀರದೊಳಿಪ್ಪನ 10

ಕೂರ್ಮ ಕದಪು - ಕಣ್ಣಿ-
ಗಿಕ್ಕಿದ ಸೊಬಗಿನ ಕಪ್ಪು - ತಲೆ -
ಹಿಕ್ಕಿ ಬಾಚಿದ ಕೇಶ ಥಳಪು - ಸರ್ವ
ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ
ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ11

ಸೂಸುವ ದಾಡಿಯ ದಂತ - ಪಙÂ್ತ-
ನಾಸ ಮೂಗುತಿಯಿಟ್ಟ ಶಾಂತ - ಸುಖ
ಲೇಸು ಹಾಸ ಜಗದಂತ - ರಂಗ
ಭಾಸ ಮಿಗಿಲು ಚಂದ್ರಕಾಂತ, ಆಹ
ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು
ಲೇಸಾಗಿ ಸಲಹುವ ದೋಷನಾಶನ ರೂಪ12

ಎಸೆವ ಪಂಜರದೋಲೆ ಕಿವಿಯ-ಹೊನ್ನ
ಕುಸುಮ ಕೂಡಿದ ಬಾವಲಿಯ - ತಿದ್ದಿ
ಕುಸುರಿಯಿಕ್ಕಿದ ಸರಪಣಿಯ - ಚಿನ್ನ
ಸೋಸಲು ಕುಂಕುಮ ರ್ಯಾಕಟೆಯ, ಆಹ
ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು
ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ13

ಕಪೋಲ - ಪೊಸ-
ಮೌಳಿ ಕೈಯಲ್ಲಿ ಕಡೆÀಗೋಲ - ನೇಣು
ಪಾಲಯ ಪಿಡಿದ ಸುಶೀಲ - ಧರೆಯ -
ಶೂಲಿಯ ನೆಲೆಸಿದ ಖೂಳನ ಸದೆದು ಹಿ-
ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ14

ರಜತ ಪೀಠ ಪುರಾಧೀಶ - ನಂದ
ವ್ರಜದೊಳಾಡಿದ ಸರ್ವೇಶ - ನಮ್ಮ
ವಿಜಯವಿಠ್ಠಲ ನಾರಿವೇಷ - ತನ್ನ
ನಿಜಭಕ್ತ ಮಧ್ವಮುನೀಶ, ಆಹ
ತ್ರಿಜಗ ಮಧ್ಯದಲಿ
ನಿಜ ಪದವಿಯನಿತ್ತು ಸುಜನರಿಗೊಲಿದನ್ನ15
*********

No comments:

Post a Comment