Wednesday 16 October 2019

ಡಂಗುರ ಹೊಡಿಸಿದ ಯಮನು ಪಾಪಿ ಹೆಂಗೆಳೆಯವರ ankita vijaya vittala

ವಿಜಯದಾಸ

ಡಂಗುರ ಹೊಡಿಸಿದ ಯಮನು |
ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು ಪ

ಮೃತಿಕೆ ಶೌಚÀದ ಗಂಧ ಪೋಗುವಂತೆ |
ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ ||
ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ |
ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು 1

ಪತಿಗೆರಗದೆ ಗೃಹಕೃತ್ಯ ಮಾಡುವಳ |
ಮತಿವಿರದೆ ಚಂಚಲದಿಪ್ಪಳ ||
ವ್ರತಗೇಡಿ ಅನ್ಯರ ಮಾತಿಗೆ ಸೋಲುವ |
ಪತಿತಳ ಎಳೆತಂದು ಹತವ ಮಾಡಿರೆಂದು 2

ಒಬ್ಬರಿಬ್ಬರ ಕೂಡ ಸಖತನ ಮಾಡುವಳ |
ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ ||
ಅಬ್ಬರದ ಸೊಲ್ಲನು ವಿಸ್ತರಿಸುವಳ |
ದಬ್ಬಿರೊ ವೃಶ್ಚಿಕದ ಕುಂಡದೊಳಗೆ ಎಂದು 3

ವಸನವಿಲ್ಲದೆ ಮೈಯ ತೊಳಕೊಂಬೊ ಪಾಪಿಯ |
ಅಶನ ಭಕ್ಷಿಸುವಾಗ ಅಳಲುವ ದುಃಖಿಯ
ಪೆಸರಿಯ ತರೆ ಕೆಳಗಾಗಿ ಬಾಧಿಸರೆಂದು 4

ಬಿಗಿದು ಪುಟವ ಹಾಕಿ ಬದಿ ಬಗಲ ಮುಚ್ಚದೆ |
ನಗುವಳು ಅವರಿವರೆಂದರಿಯದೆ ||
ಬಗೆ ಬಗೆ ವಯ್ಯಾರ ನಿಜವಾಗಿ ತೋರುವ |
ಅಧಮ ನಾರಿಯೆ ತಂದು ಅರಿದು ಕೊಲ್ಲಿರೊ ಎಂದು 5

ಪಾಕದ ಪದಾರ್ಥ ನೋಡಿ ಇಡದವಳ |
ಲೋಕವಾರ್ತೆಗೆ ಮನೆಯ ಜರಿದು ಪತಿಗೆ ||
ಬೇಕಾದವರ ಜರಿದು ಬಹುಪುಷ್ಪ ಮುಡಿದಿಪ್ಪ
ಕಾಕಿಯ ಎಳೆತಂದು ಕಣ್ಣು ಕಳಿಚಿರೆಂದು 6

ಪಂಕ್ತಿ ಭೇದವ ಮಾಡಿ ಬಡಿಸುವ ಪಾಪಿಯ |
ಕಾಂತ ಕರೆದಾಗ ಪೋಗದವಳ ||
ಸಂತರ ನೋಡಿ ಸೈರಿಸದಿಪ್ಪ ನಾರಿಯ |
ದಂತಿಯ ಕೆಳಗೆ ಹಾಕಿ ತುಳಿಸಿ ಕೊಲ್ಲಿರೊ ಎಂದು 7

ವಿಧವೆಯ ಸಂಗಡ ಇರಳು ಹಗಲು ಇದ್ದು |
ಕದನ ತೆರೆದು ನೆರಳು ನೋಡುವಳ ||
ಕದದ ಮುಂದೆ ಕುಳಿತು ತಲೆ ಬಾಚಿ ಕೊಂಬುವಳ |
ಕುದಿಸಿ ಕಟಾಹದೊಳು ಮೆಟ್ಟಿ ಸೀಳಿರೊ ಎಂದು 8

ಆವದಾದರು ತೊರೆದು ಪತಿದೈವವೆಂದರಿದು |
ಸೇವೆಯ ಮಾಡಿ ಸುಜನರಿಗೆ ಬೇಗ ||
ದೇವೇಶ ವಿಜಯವಿಠ್ಠಲ ತಿರುವೆಂಗಳ |
ಕೈವಲ್ಯ ಕಲ್ಪಿಸಿ 9
***

pallavi

dangura haysida yamanu pApi hengaLeyara tandu bhanga paDisirenu

caraNam 1

mrattike shaucava gandha pOguvante nityadalli snAna mADade summane
tottu baDikyAgi mukhava toLiyadippa katte hengasaranu kaDidu kollirO endu

caraNam 2

patigeragade graha kratya mADuvaLa mati Ekavirade cancaladippaLa
tarhagEDI anyara mAtige sOluva patitaLa eLe tandu hatava mADirendu

caraNam 3

obbaribbara kUDa sakatana mADuvaLa obbobbarige meyyittu pADuvaLa
abbarada sollanu vistarisuvaLa dabbirO vrashcikada kuNDadoLage endu

caraNam 4

vasanavillade mayya toLakombO pAiya hasiveyAdare malagi koNDppaLa
ashana bhakSisuvAga aLaluva duhkiya pesariya tale keLabAgi bAdisirendu

caraNam 5

bigidu puTava hAki badibagalamuccade naguvaLu avarivarendariyade
bage bage vayyAra nijavAgi tOruva adhama nArya tandu aridu kollirO endu

caraNam 6

pAkada padArtha nODi iDadavaLa lOkavArtege maneya jaridu patge
bEkAvarajaridu bahu puSpamuDidippa kAkiya eLadu tandu kaNNu kaLacirendu

caraNam 7

panki bhEdava mADi baDisuva pApiya kAntakaredAga pOgadavaLa
santara nODi sairisdippa nAriya dantita keLage hAki tuLisi kollirO endu

caraNam 8

vidaveya sangava iruLu hagalu iddu radana teredu neraLu nODuvaLa
kadadamunda kuLitu tale bAcikombuvaLa pudisi kaTAhadoLu meTTi sILirO endu

caraNam 9

avadAdaru toredu pati deivavenderidu sEveya mADi sujanarige bEga
dEvEsha vijayaviThaLa tiruvengaLa kAyuvanu dayadinda kaivalya kalpisi
***


No comments:

Post a Comment