ಶ್ರೀ ವಿಜಯದಾಸರ ಕೃತಿ
ರಾಗ ಅಠಾಣ ಆದಿತಾಳ
ಕೂಗೆಲೋ ಮನುಜ ಕೂಗೆಲೋ ॥ ಪ ॥
ಸಾಗರಶಯನನೆ ಜಗಕೆ ದೈವವೆಂದು ॥ ಅ ಪ ॥
ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ॥1॥
ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು ॥ 2 ॥
ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ -
ವರದ ಅಪಾರ ಸದ್ಗುಣನಿಲಯ
ಮುರಮರ್ದನ ಮಂಜುಭಾಷಣ ಕೇಶವ
ನಿರ್ಮಲ ದೇವ ಭೂವರಾಹ ಮೂರುತಿಯೆಂದು ॥ 3 ॥
ನಿಗಮವಂದಿತ ವಾರಿಜನಾಭ ಅನಿರುದ್ಧ
ಅಘನಾಶ ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ತ್ರಿಗುಣವಂದಿತ ನರಮೃಗ ರೂಪನೆಂದು ॥ 4 ॥
ವಟಪತ್ರಶಯನ ಜಗದಂತರ್ಯಾಮಿ
ಕಟಕ ಮುತ್ತಿನಹಾರ ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು ॥ 5 ॥
ವಿಷ್ಣು ಸಂಕರುಷಣ ಮಧುಸೂದನ ಶ್ರೀ -
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ॥ 6 ॥
ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾರ್ದನನೆ
ವಿಭುವೇ ವಿಶ್ವರೂಪ ವಿಶ್ವನಾಟಕ ಋ -
ಷಭ ದತ್ತಾತ್ರೇಯ ಶ್ರೀರಾಮ ಮೂರುತಿಯೆಂದು ॥ 7 ॥
ವೈಕುಂಠ ವಾಮನ ವಾಸುದೇವ ರಂಗ
ಲೋಕೇಶ ನವನೀತಚೋರ ಜಾರ
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀಕೃಷ್ಣ ಮೂರುತಿಯೆಂದು ॥ 8 ॥
ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಅಸುರ ಭಂಜನ ತ್ರಿವಿಕ್ರಮ ಕಪಿಲ
ಕುಸುಮಶರನಯ್ಯ ಶಾರಂಗಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ॥ 9 ॥
ಸರ್ವನಾಮಕ ಸರ್ವಚೇಷ್ಟಕ ಸರ್ವೇಶ
ಸರ್ವಮಂಗಳ ಸರ್ವಸಾರ ಭೋಕ್ತ
ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ
ಸರ್ವಮೂಲಾಧಾರ ಕಲ್ಕಿ ಮೂರುತಿಯೆಂದು ॥ 10 ॥
ಈ ಪರಿ ಕೂಗಲು ಆಪತ್ತು ಪರಿಹಾರ ಅ -
ಪಾರ ಜನ್ಮ ಬೆಂಬಿಡದಲೆ ಸಪ್ತ -
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ ॥ 11 ॥
*************
ಕೂಗೆಲೋ ಮನುಜ ಕೂಗೆಲೋ ಪ
ಸಾಗರಶಯನನೆ ಜಗಕೆ ದೈವವೆಂದು ಅ
ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಮತ್ಸ್ಯ ಮೂರುತಿಯೆಂದು1
ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ
ಕೂರ್ಮ ಮೂರುತಿಯೆಂದು2
ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ
ವರದ ಅಪಾರ ಸದ್ಗುಣನಿಲಯ
ಮುರುಮರ್ದನ ಮಂಜು ಭಾಷಣ ಕೇಶವ
ನಿರ್ಮಲ ದೇವ ಭೂವರಾಹಮೂರುತಿ ಯೆಂದು 3
ನಿಗಮವಂದಿತ ವಾರಿಜನಾಭ ಅನಿರುದ್ಧ
ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ನರಮೃಗ ರೂಪಾನೆಂದು 4
ವಟಪತ್ರಶಯನ ಜಗದಂತರ್ಯಾಮಿ
ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು5
ವಿಷ್ಣು ಸಂಕರುಷಣ ಮಧುಸೂದನ ಶ್ರೀ
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು 6
ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾದರ್Àನನೆ
ವಿಭುವೇ ವಿಶ್ವರೂಪ ವಿಶ್ವನಾಟಕ ಋ
ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು 7
ವಾಸುದೇವ ರಂಗ
ನವನೀತ ಚೋರ ಜಾರ
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು 8
ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಭಂಜನ ಕುಸುಮ ಶರನಯ್ಯ ಶಾರ್ಙಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು 9
ಸರ್ವಮಂಗಳ ಸರ್ವಸಾರ ಭೋಕ್ತ
ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ
ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು 10
ಪರಿ ಅಪಾರ ಜನ್ಮ ಬೆಂಬಿಡದಲೆ ಸಪ್ತ
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ 11
**********
No comments:
Post a Comment