Wednesday, 15 December 2021

ಭಾರವೇ ಭಾರತೀರಮಣ ನಿನಗೆ ankita vijaya vittala BHAARAVE BHAARATIRAMANA NINAGE



 ರಾಗ ಷಣ್ಮುಖಪ್ರಿಯ    ಆದಿತಾಳ 

2nd Audio by Mrs. Nandini Sripad


ಶ್ರೀ ವಿಜಯದಾಸರ ಕೃತಿ 


ಭಾರವೇ ಭಾರತೀರಮಣ ನಿನಗೆ ನಾ ॥ ಪ ॥

ಅಪಾರಮಹಿಮನೆಂದು ಸಾರುತ ನಾ ಬಂದು ।
ಕರವ ಮುಗಿವೆ ನಿಂದು ॥ ಅ ಪ ॥

ಲಂಕಾನಾಥನ ಬಿಂಕವ ಮುರಿದು ।
ಶಂಕೆಯಿಲ್ಲದೆ ನೀ ಲಂಕೆಯ ದಹಿಸಿದೆ ॥
ಪಂಕಜಾಕ್ಷಿಗೆ ಅಂಕಿತದುಂಗುರವಿತ್ತು ।
ಅಕಳಂಕಚರಿತನ ಕಿಂಕರನೆನಿಸಿದೆ ॥ 1 ॥

ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ ।
ತಾಮಸ ಬಕನ ನಿರ್ಧೂಮ ಮಾಡಿದೆ ॥
ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ ।
ತಾಮರಸಾಕ್ಷನ ಸೇವೆಯ ಮಾಡಿದೆ ॥ 2 ॥

ವೇದವ್ಯಾಸರ ಪಾದವ ಧ್ಯಾನಿಸಿ ।
ಮೋದದಿಂದ ಬಹುವಾದಗಳಾಡಿ ॥
ಅಧಮಶಾಸ್ತ್ರಗಳ ಹೋಮವ ಮಾಡಿ ।
ಮಧುರಿಪು ವಿಜಯವಿಠಲ ಗರ್ಪಿಸಿದೆ ॥ 3 ॥
***

BAravE BArati ramaNa||
ninage nA BAravE BAratI ramaNa||pa||

laMkAnAthana biMkava muridu
akaLaMka caritana kiMkaraneniside||laMkAnAthana||
paMkajAkShige aMkitaduMgura koTTu||
SaMkeyillade laMkeya dahiside ||BAravE||

sOmakuladi nissIma mahimanenisi
tAmasa bakana nirdhUma mADide||sOmakuladi||
kAmini mOhise prEmadi salahide||
tAmarasAKyana sEveya mADide ||BAravE||

vEdavyAsara pUjeya mADi
mOdadiMda bahuvAdagaLADi||vEdavyAsara||
adhama SAstragaLa hOmava mADi||
vijayaviThThalana sEvakaneniside ||BAravE||
***


No comments:

Post a Comment