Wednesday, 16 October 2019

ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ankita vijaya ramachandra vittala

 ಶ್ರೀ ವಿಜಯರಾಮಚಂದ್ರವಿಠಲ ಕೃತಿ


 ರಾಗ ಕಾಂಬೋಧಿ ಖಂಡಛಾಪುತಾಳ


ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು ।

ಕಟ್ಟಳೆ ಎನ್ನದೆಂತೋ ॥ ಪ ॥

ನಷ್ಟಗೈಸುವುದಿನ್ನು ಕಷ್ಟಪಡಿಸಲಿ ಬ್ಯಾಡ ।

ಇಷ್ಟ ಕೃಷ್ಣಾರ್ಯನೇ ॥ ಅ ಪ ॥


ಪುಟ್ಟಿದ ಮೊದಲಾಗಿ ಭ್ರಷ್ಟತನವೇ ಪೊಂದಿ ।

ದುಷ್ಟರೊಳು ಶ್ರೇಷ್ಠನಾದೆ ॥

ಎಷ್ಟು ದಿನ ಇದರಂತೆ ಇಟ್ಟಿರುವೆಯೊ ಗುರುವೇ ।

ಇಷ್ಟೇನೆ ಎನ್ನ ಯೋಗ್ಯತೆಯು ॥ 1 ॥


ಪಾಪಿ ವಿಷಯ ಜ್ವಾಲೆಯು ಕುಪಿತನೆಂದೆನ್ನ ।

ತಪಿಸಿ ಬೇಯಿಸುವುದೋ ॥

ಕೃಪೆಯೆಂಬ ಮಳೆಗರೆದು ಉಪಶಮನ ಮಾಡೋ ।

ಆಪದ್ಭಾಂಧವನಲ್ಲವೇ ಗುರುವೇ ॥ 2 ॥


ಪಾಪಕಾರ್ಯರತನ ಪಾಪ ಎಣಿಸದೇ ಜನರಿಂದ ।

ತಾಪಸಿ ಎನಿಸುವುದ್ಯಾಕೋ ॥

ಭೂಪ ವಿಜಯರಾಮಚಂದ್ರವಿಠ್ಠಲನ।

ಆ ಪಾದಪದುಮವ ನಂಬಿಹ ಗುರುವೇ ॥ 3 ॥

No comments:

Post a Comment