Thursday 2 December 2021

ವೃಂದಾವನ ನೋಡಿರೋ ಗುರುಗಳ ankita venkata vittala VRUNDAVANA NODIRO GURUGALA





ರಾಘವೇಂದ್ರ ಸ್ವಾಮಿಗಳ ಸ್ತೋತ್ರ


ವೃಂದಾವನ ನೋಡಿರೋ 
ಗುರುಗಳ ವೃಂದಾವನಾ ನೋಡಿರೋ | 

ವೃಂದಾವನಾ ನೋಡಿ ಆನಂದ ಮದವೇರಿ | 
ಚಂದದಿ ದ್ವಾದಶ ಪುಂಡ್ರಾಂಕಿತಗೊಂಬ | ಅ.ಪ. | 

ತುಂಗಾ ಭದ್ರ ನದಿಯ ತೀರದಿ ಇದ್ದು | 
ತುಂಗಾ ಮಂಟಪ ಮಧ್ಯದಿ | 
ಶೃಂಗಾರ ತುಳಸೀ ಪದುಮಾಕ್ಷ ಸರಗಳಿಂದ | 
ಮಂಗಳಕರ ಮಹಾಮಹಿಮೆಯಿಂದೊಪ್ಪುವ | ೧ | 

ದೇಶ ದೇಶದಿ ತಿರುಗುತ ಇಲ್ಲಿಗೆ ಬಂದು | 
ವಾಸವಾಗಿ ಸೇವಿಪ | 
ಭಾಷೆ ಕೊಟ್ಟಂದಧಿ ಬಹುವಿಧ ವರಗಳ | 
ಸೂಸುವ ಕರ ಮಹಾ ಮಹಿಮೆಯಿಂದೊಪ್ಪುವ | ೨ | 

ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ | 
ಮತ್ತೆ ಅಭೀಷ್ಟವ ಕೊಡುವ | 
ಸತ್ಯಾದಿ ಗುಣಸಿಂಧು ವೆಂಕಟ ವಿಠಲನ | 
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ | ೩ |
***

ವೃಂದಾವನ ನೋಡಿರೋ - ಗುರುಗಳವೃಂದಾವನ ಪಾಡಿರೋ ಪ

ವೃಂದಾವನ ನೋಡಿ - ಆನಂದ ಮದವೇರಿಚೆಂದದಿ ದ್ವಾದಶ ಪೌಂಡ್ರಾಂಕಿತಗೊಂಬ ಅ.ಪ
ತುಂಗಭದ್ರಾ ನದಿಯ ತೀರದಿ ಇದ್ದತುಂಗ ಮಂಟಪ ಮಧ್ಯದಿಶೃಂಗಾರ ತುಲಸಿ ಪದ್ಮಾಕ್ಷ ಸರಗಳಿಂದಮಂಗಳಕರ ಮಹಾ ಮಹಿಮೆಯಿಂದೊಪ್ಪುವ 1

ದೇಶ ದೇಶದಿ ಮೆಚ್ಚುತ - ಇಲ್ಲಿಗೆ ಬಂದುವಾಸವಾಗಿ ಸೇವಿಪಭಾಷೆ ಕೊಟ್ಟಂದದಿ ಬಹುವಿಧ ವರಗಳಸೂಸುವ ಕರ ಮಹಾಮಹಿಮೆಯಿಂದೊಪ್ಪುವ 2

ನಿತ್ಯ ಸನ್ನಿಧಿ ಸೇವಿಪ - ಭಕ್ತರಿಗೆಲ್ಲಮತ್ತಭೀಷ್ಟವ ಕೊಡುತ ಪತ್ಯಾಧಿಗುಣ ಸಿಂಧು ವೆಂಕಟವಿಠ್ಠಲನ ನಿತ್ಯ ಸನ್ನಿಧಿಯಿಂದ ನಿರುತ ಪೊಜೆಯಗೊಂಬ 3
***

No comments:

Post a Comment