Wednesday, 15 December 2021

ಉಗಾಭೋಗ ugabhoga ankita rangavittala UGABHOGA SRIPADARAJARU


|| ಶ್ರೀ ರಂಗವಿಠಲ || 



ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ ನಿನ್ನ
ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ
***

ಧ್ಯಾನವು ಕೃತಯುಗದಲ್ಲಿ ಯಜನ!
ಯಜ್ಞವು ತ್ರೇತಾಯುಗದಲ್ಲಿ!
ದಾನವಾಂತಕನ ದೇವತಾರ್ಚನೆಯು ದ್ವಾಪರಯುಗದಲ್ಲಿ!
ಕಲಿಯುಗದಿ ಗಾನದಿ ಕೇಶವನೆಂದರೆ ಕೈಗೂಡುವನು ಶ್ರೀ ರಂಗವಿಠ್ಠಲ!!

ಕೃತಯುಗದಲ್ಲಿ ಶ್ರೀಹರಿಯ ಅಖಂಡಧ್ಯಾನದಿಂದಲೂ,
ತ್ರೇತಾಯುಗದಲ್ಲಿ ಶ್ರೀ ಹರಿಯನ್ನು ಉದ್ದೇಶಿಸಿ ಮಾಡುವ ವಿವಿಧ ಯಜ್ಞಯಾಗಾದಿಗಳಿಂದಲೂ,
ದ್ವಾಪರಯುಗದಲ್ಲಿ ಶ್ರೀ ಹರಿಯ ಷೋಡಶೋಪಚಾರಗಳಿಂದಲೂ,
ಆಯಾ ಯುಗದ ಜನರಿಗೆ ಯಾವ ಶ್ರೇಷ್ಠವಾದ ಮೋಕ್ಷಾಖ್ಯ ಫಲವನ್ನು ಹೊಂದಲು ಸಾಧ್ಯವಾಗುತ್ತಿದ್ದಿತೋ ಅದೇ ಫಲವನ್ನು ಘೋರವಾದ ಈ ಕಲಿಯುಗದಲ್ಲಿ ಜನರು ಕೇವಲ ಹರಿನಾಮಸಂಕೀರ್ತನೆ ಮಾತ್ರದಿಂದ ಹೊಂದಬಹುದಾಗಿದೆ ಎಂದು
ಶ್ರೀ ಮದ್ಭಾಗವತದಲ್ಲಿ ಶ್ರೀ ಶುಕಾಚಾರ್ಯರು ಪರೀಕ್ಷಿತರಾಜನಿಗೆ ಹರಿನಾಮಸಂಕೀರ್ತನೆಯ
ಮಹತ್ವವನ್ನು ತಿಳಿಸುತ್ತಾರೆ.....
ಇದೇ ವಿಷಯವನ್ನು ಶ್ರೀ ಶ್ರೀಪಾದರಾಜರು ಈ ಉಗಾಭೋಗದಲ್ಲಿ ಕೋಟ್ ಮಾಡಿದ್ದಾರೆ ಎಂದು ತಿಳಿಯಬಹುದಷ್ಟೇ.
ಕೃತೇ ಯದ್ಧ್ಯಾಯತೋ ವಿಷ್ಣುಂ
ತ್ರೇತಾಯಾಂ ಯಜತೋ ಮಖೈ:!
ದ್ವಾಪರೇ ಪರಿಚರ್ಯಾಯಾಂ
ಕಲೌ ತದ್ಧರಿಕೀರ್ತನಾತ್!!
( ಶ್ರೀಮದ್ಭಾಗವತ)

ಶ್ರೀ ಮದ್ಭಾಗವತೋಕ್ತಿಯನ್ನು ಅನುಸರಿಸಿಕೊಂಡೇ (ಅನುಗುಣವಾಗಿ)
ಶ್ರೀ ಶ್ರೀಪಾದರಾಜರು ಈ ಉಗಾಭೋಗವನ್ನು ಮಾಡಿದ್ದಾರೆ ಎಂಬುದರಲ್ಲಿ ತಾತ್ಪರ್ಯ
**

ಕಲಿ ಕಾಲಕೆ ಸಮಯುಗ ವಿಲ್ಲವಯ್ಯ |
ಕಲುಷ ಹರಿಸಿ ಕೈವಲ್ಯ ವೀವುದಯ್ಯ |
ಸಲೆನಾಮ ಕೀರ್ತನೆ ಸ್ಮರಣೆ ಸಾಕಯ್ಯ |
ಸ್ಮರಿಸಲು ಸಾಯುಜ್ಯ ಪದ ವೀವುದಯ್ಯ |
ಬಲವಂತ ಶ್ರೀರಂಗ ವಿಠಲನ ನೆನೆದರೆ |
ಕಲಿಯುಗವೆ ಕೃತಯುಗ ವಾಗುವದಯ್ಯ ||

ಉಗಾಭೋಗ ಸಂಪೂರ್ಣಮ್ 
*****


ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ

ಕಲಿಕಾಲಕೆ ಸಮಯುಗವಿಲ್ಲವಯ್ಯ
ಕಲುಷ ಹರಿಸಿ ಕೈವಲ್ಯವೀವುದಯ್ಯ
ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ ನೆನೆದರೆ
ಕಲಿಯುಗ ಕೃತಯುಗವಾಗುವುದಯ್ಯ
***

“ಬಲ್ಲವನು ಎಲ್ಲವನು ಹರಿಯಿರಲು ಭಜಿಸದೆ|
ಕ್ಷುಲ್ಲದೇವರ ಬೇಡಿ ಸುಖವ ಬಯಸುವೆ ನೀನು|
ಕಲ್ಲುಗೋವಿನ ಪಾಲ ಕರುವು ಬಯಸಿದಂತೆ
ಹಲ್ಲು ಹೋಹದನರಿಯ ಅಕ್ಕಟಕಟ
ಬಲ್ಲಿದ ದೈವ ಶ್ರೀರಂಗ ವಿಠಲನು
ಕೈವಲ್ಯವನೇ ಕೊಟ್ಟು ಸಂತೈಸುವನು ಭಜಿಸೋ||”
***                       


ಅಂಬರದಾಳವನು ಇನಶಶಿಗಳಲ್ಲದೆ
ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ?
ಜಲದ ಪ್ರಮಾಣವ ತಾವರೆಗಳಲ್ಲದೆ
ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ?
ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆ
ಚೀರ್ವ ಕಾಗೆಗಳು ತಾವು ಬಲ್ಲವೆ?
ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು, ಮ
ತ್ತನ್ಯರೇನು ಬಲ್ಲರಯ್ಯ ?
ಭಕ್ತರಾಧೀನನೆ ಭಕ್ತರೊಡೆಯನೆ
ಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ
***

ಧ್ಯಾನವು ಕೃತಯುಗದಿ
ಯಜನ ಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು

ಕೈಗೂಡುವನು ರಂಗವಿಠಲ

ಕರುಣದಿ ತನುಮನಧನಂಗಳೆಲ್ಲವು
ನಿನ್ನ ಚರಣಕೊಪ್ಪಿಸಿದ ಬಳಿಕ
ಮರಳಿ ಎನ್ನ ಮರುಳು ಮಾಡುವರೆ
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ

ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೊ ರಂಗವಿಠಲ

ಬೆನಕನನೊಲ್ಲೆನವ್ವ ಕುಲುಕಿ ನಡಿಯುವವನ
ಷಣ್ಮುಖನನೊಲ್ಲೆನವ್ವ ಹಲವು ಬಾಯವನ
ಇಂದ್ರನನೊಲ್ಲೆನವ್ವ ಮೈಗಣ್ಣಿನವನ
ಚಂದ್ರನನೊಲ್ಲೆನವ್ವ ಕ್ಷಯರೋಗದವನ
ಸೂರ್ಯನನೊಲ್ಲೆನವ್ವ ಉರಿದು ಮೂಡುವವನ
ಹರನ ನಾನೊಲ್ಲೆನವ್ವ ಹಣೆಗಣ್ಣಿನವನ
ಜನಕೆಲ್ಲ ಚೆಲುವನ ಜಗಕೆಲ್ಲ ಒಡೆಯನ

ತಂದುತೋರೆ ನಮ್ಮ ರಂಗವಿಠಲನ
******
ಎನ್ನ ಮನ ವಿಷಯಂಗಳಲಿ ಮುಣುಗಿತೋ l
ಎನ್ನ ತನು ವೃದ್ಧಾಪ್ಯದಲಿ ಐದಿತೋ l
ಅಂತಕರ ಕರೆ ಬಾಹೊ ಹೊತ್ತಾಯಿತೋ l
ಹೀಗೆ ತರಳರ  ಬಿಡುವ ತಾಯಿಗಳು ಉಂಟೆ l
ನೀ ಕರುಣನಿಧಿಯೆಂಬ ಬಿರಿದು ಸಲ್ಲಿಸು ದೇವ l
ಕರುಣಾಕರ ಸಿರಿರಂಗವಿಟ್ಠಲರೇಯ l
ನೀ ಕರುಣನಿಧಿಯೆಂಬ ಬಿರಿದು ಸಲ್ಲಿಸು ದೇವ l
ಕಾಲ ವಿಲಂಬವು ಇನಿತಿಲ್ಲವೈಯ್ಯ l
ವ್ಯಾಳ ಅರಿತು ಬಿನ್ನಹಮಾಡಿದೆ ll
*****



ಬರುವುದು ಬುದ್ಧಿಯು ಬಲವು ಕೀರುತಿಯು
ನಿರುತದಿ ಧೈರ್ಯವು ನಿರ್ಭಯತ್ವವು
ಅರೋಗಾನಂದ ಅಜಾಡ್ಯ ವಾಕ್ಪಟುತ್ವವು

ಹರೇ ರಂಗವಿಠಲ ಹನುಮಾ ಎನಲು

ಬಲ್ಲವನು ಉಳ್ಳವನು ನೀನಿರಲು ಭಜಿಸದೆ
ಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನು
ಕಲ್ಲು ಗೋವಿನ ಹಾಲು ಕರು ಬಯಸಿದಂತೆ ನಾ
ಹಲ್ಲು ಹೋಹುದನರಿಯೆ ಅಕಟಕತ ಮಂದಮತಿಯು
ಕಳ್ಳ ಗೋವನು ಹುಲ್ಲು ಗಂಜಿಯನೆರೆದು ಸಲಹಿದಡೆ ಏನು ಫಲ
ಬಲ್ಲಿದಾಸೆಯ ಬಿಡಿಸೋ ನಮೋ ರಂಗವಿಠಲ

ಮುಂದೆ ಕೆಟ್ಟು ಬಂದವರ
ಹಿಂದಕೆ ಹಾಕಿಕೊಂಡ ಬಳಿಕ
ಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ !
ಅಂದವಲ್ಲ ನಿನ್ನ ಘನತೆಗೆ
ತಂದೆತಾಯಿಗಳು ತಮ್ಮ
ಕಂದನವಗುಣಗಳೆಣಿಸುವರೆ ?
ಎಂದೆಂದಿಗೆನ್ನ ಉದ್ಧರಿಸಬೇಕೆಲೆ ದೇವ
ಸಂದೇಹವ್ಯಾತಕೆ ನಮೋ ರಂಗವಿಠಲಯ್ಯ


ಪುನ್ನಾಗವರಾಳಿ ರಾಗ

ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ(?)
ಅಂಬುಜೋದರನ ನೆಲೆ ಅರಿಯದ ದುರಾತುಮರು
ಬೆಂಬಿಡದೆ ಸುಖವನರಸುವರುಂಟೆ? ಉದ-
ರಂಭರದಿ ಡಂಭಕರು ಇಹಪರಕೆ ಬಾಹ್ಯರೆಂದೂ
ಶಂಬರಾಂತಕ ಪಿತ ರಂಗವಿಠಲರೇಯನ್ನ ಪಾ-
ದಾಂಬುಜೋದ್ಭ್ರಮರದೊಳು(?) ಮಿಗೆ ದೂರರಾದವರು

ಬೆಂಬಿಡದೆ ಸುಖವನರಸುವರುಂಟೆ?

ಭವವೆಂಬ ಅಡವಿಯಲ್ಲಿ ತಾಪತ್ರಯದಲ್ಲಿ ಸಿಲುಕಿ
ಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀಹರಿನಾಮ
ಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನ

ಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ
ನಿತ್ಯಪೂರ್ಣ ಮಂಗಲವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೊ ವ್ಯಾಸಮುನಿವಂದ್ಯ ಗೋಪಿನಾಥನೆ
ತುರುಬಿನ ಮ್ಯಾಲೆ ತುರುಬಿದ ಮೊಲ್ಲೆ ಮಲ್ಲಿಗೆ ಕುಸುಮಗಳ ರಂಗಾ
ಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪ ತರುವನೆನ್ನೀ ರಂಗಾ
ಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾ
ಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾ
ಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದ ಮಾಡಿದ
    
ಎನ್ನ ಮನ ವಿಷಯಂಗಳಲಿ ಮುಣುಗಿತೊ
ಎನ್ನ ತನುವು ವೃದ್ಧಾಪ್ಯ ಐದಿತೊ
ಅಂತಕರ ಕರೆ ಬಾಹೊ ಹೊತ್ತಾಯಿತೊ
ಕಾಲ ವಿಳಂಬವಿನಿತಿಲ್ಲವಯ್ಯ
ವ್ಯಾಳೆ ಅರಿತು ಬಿನ್ನಹ ಮಾಡಿದೆ
ಹೀಗೆ ತರಳರ ಬಿಡುವ ತಾಯಿಗಳುಂಟೆ , ನೀ
ಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವ
ಕರುಣಾಕರ ಸಿರಿರಂಗವಿಠಲರೇಯ , ನೀ

ಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವ

ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ
ಶರಣು ಬಂದವನ ರವಿಯತನಯನ ನೋಡು

ಮರೆಯದೆ ಭಜಿಸು ರಂಗವಿಠಲರೇಯನ

ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ
ಎನ್ನ ಮನವನು ಬಿಡದಿಹ ಹರಿ
ಜನ್ನರ ಜನ್ನ ನರಹರಿ ಗೋವಿಂದ
ಎನ್ನ ಮನವನು ಬಿಡದಿಹ ಪುಂಡರೀಕ
ಮನ ಪಿರಿಯಾನೆಯಯ್ಯ

ಪಂಡರಂಗಿಪುರೀಪತಿ ಸಿರಿರಂಗವಿಠಲ
*********

ugabhoga
ಶ್ರೀಪಾದರಾಜರ ಅವರಿಂದ    
ರಚಿತವಾದ ಉಗಾಭೋಗಗಳು     

ಧ್ಯಾನವು ಕೃತಯುಗದಿ ಯಜನ
ಯಜ್ಞವು ತ್ರೇತಾಯುಗದಿ 
ದಾನವಾಂತಕನ ಅರ್ಚನೆಯು 
ದ್ವಾಪರದಿ ಅವರಿಗೆಷ್ಟುಫಲವೋ ಅಷ್ಟು ಫಲವು 
ಕಲಿಯುಗದಿ ಗಾನದಲಿ ಕೇಶವ ಎನಲು 
ಕೈಗೂಡುವನು ರಂಗವಿಠಲ 

             2
ಕಲಿಕಾಲಕೆ ಸಮಯುಗವು ಇಲ್ಲವಯ್ಯ 
ಕಲುಷಹರಿಸಿ ಕೈವಲ್ಯವೀವುದಯ್ಯ 
ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ 
ಸ್ಮರಿಸಲು ಸಾಯುಜ್ಯಪದವೀವುದಯ್ಯ 
ಬಲವಂತ ಶ್ರೀರಂಗವಿಠಲನ ನೆನೆದರೆ 
ಕಲಿಯುಗವೆ ಕೃತಯುಗವಾಗುವದಯ್ಯಾ 

              3
ಬರುವದು ಬುದ್ಧಿಯು ಬಲವು ಕೀರುತಿಯು 
ನಿರುತ ಧೈರ್ಯವು ನಿರ್ಭಯತ್ವವು 
ಅರೋಗಾನಂದ ಅಜಾಡ್ಯ ವಾಕ್ಪಟುತ್ವವು 
ಹರೇ ರಂಗ ವಿಠಲ ಹನುಮಾ ಎನಲು 

                4
ಭವವೆಂಬ ಅಡವಿಯಲ್ಲಿ ತಾಪತ್ರಯದಿ ಸಿಲುಕಿ 
ಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀಹರಿನಾಮ 
ಹೊರತಾಗಿ ಮತ್ತುಂಟೆ ಎನ್ನ ಮನ ನಿನ್ನ 
ಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ
*****

“ಕಲಿಕಾಲಕೆ ಸಮಯುಗವಿಲ್ಲವಯ್ಯ|
ಕಲುಷಹರಿಸಿ ಕೈವಲ್ಯವೀವುದಯ್ಯ
ಸಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ
ಸ್ಮರಿಸಲು ಸಾಯುಜ್ಯ ಪದವೀವುದಯ್ಯ
ಬಲವಂತ ಶ್ರೀರಂಗವಿಠಲನ 
ನೆನೆದರೆ ಕಲಿಯುಗವೇ ಕೃತಯುಗವಾಗುವುದಯ್ಯ.”
***

No comments:

Post a Comment