Tuesday, 19 November 2019

ಹರಹರ ಪುರಹರ ಗಿರಿಜಾಮನೊಹರ ankita prasannavenkata

ಹರ ಹರ ಪುರಹರ ಗಿರಿಜಾಮನೊಹರ
ಸುರವರ ಕರುಣಾಕರನೆ ನಮೋ ನಮೋ ||ಪ||

ಶರಣರ ಸುರತರು ವರಪಂಪಾಪತಿ
ವಿರೂಪಾಂಬಕ ಪೊರೆ ಶುಭದಿ ||ಅಪ||

ಮದನನ ಮಥನ ಪಂಚವದನ ಕೈಲಾಸದ
ಸದನ ಸದಾಶಿವ ನಮೋ ನಮೋ
ಹದಿನಾಲ್ಕು ಭುವನದ ಬಲ್ಲರಜಿತ
ಕದನ ಕಲುಷಹರ ನಮೋ ನಮೋ ||೧||

ತಾರಕಪತಿಧರ ಭೂರಿಕೃಪಾಂಬಿಧಿ
ತಾರಕಹರ ಪಿತ ಜಯಾ ಜಯಾ
ತಾರಕ ಉಪದೇಶ ಕಾರಕ ಘನಭವ
ತಾರಕ ಮೃಂತ್ಯುಂಜಯಾ ಜಯಾ ||೨||

ಶೇಷಾಭರಣವಿ ಭೂಷಾಭವ ವಿ
ಶೇಷ ಭಕುತಪ್ರಿಯ ವಿಭೋ ವಿಭೋ
ಶೇಷಭೂಭೃತ್ ಪೊಷ ಪ್ರಸನ್ವೆಂಕ
ಟೇಶ ಭಜನಶೀಲ ವಿಭೋ ವಿಭೋ ||೩||
***


hara hara purahara girijAmanohara
suravara karuNAkarane namO namO ||pa||

SaraNara surataru varapaMpApati
virUpAMbaka pore SuBadi ||apa||

madanana mathana pancavadana kailAsada
sadana sadASiva namO namO
hadinAlku Buvanada ballarajita
kadana kaluShahara namO namO ||1||

tArakapatidhara BUrikRupAMbidhi
tArakahara pita jayA jayA
tAraka upadESa kAraka GanaBava
tAraka mRuntyunjayA jayA ||2||

SEShABaraNavi BUShABava vi
SESha Bakutapriya viBO viBO
SEShaBUBRut poSha prasanvenka
TESa BajanaSIla viBO viBO ||3||
***
by ಪ್ರಸನ್ನವೆಂಕಟದಾಸರು
ಹರಹರಪುರಹರಗಿರಿಜಾಮನೋಹರಸುರವರ ಕರುಣಾಕರನೆ ನಮೋ ನಮೋಶರಣರಸುರತರುವರಪಂಪಾಪತಿವಿರೂಪಾಂಬಕ ಹೊರೆ ಶುಭದಿ ಪ.ಮದನ

ಮಥನಪಂಚವದನಕೈಲಾಸದಸದನಸದಾಶಿವ ನಮೋ ನಮೋಹದಿನಾಲ್ಕು ಭುವನದಹದನಬಲ್ಲರಿಜಿತಕದನಕಲುಷಹರ ನಮೋ ನಮೋ1

ತಾರಕಪತಿಧರ ಭೂರಿಕೃಪಾಂಬುಧಿತಾರಕಹರಪಿತ ಜಯ ಜಯತಾರಕಉಪದೇಶಕಾರಕ ಘನಭವತಾರಕಮೃತ್ಯುಂಜಯಜಯ2

ಶೇಷಾಭರಣವಿಭೂಷಾಭವ ವಿಶೇಷಭಕುತಪ್ರಿಯ ವಿಭೋ ವಿಭೋಶೇಷಭೂಭೃತ್ ಪೋಷ ಪ್ರಸನ್ವೆಂಕಟೇಶ ಭಜನಶೀಲ ವಿಭೋ ವಿಭೋ 3
***

No comments:

Post a Comment