Wednesday, 22 December 2021

ಏನೆ ಮನವಿತ್ತೆ ಲಲಿತಾಂಗಿ ankita neleyadikeshava MUNDIGE ಮುಂಡಿಗೆ ninda stutih ENE MANAVITTE LALITAANGI






ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||

ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||

ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||
***

Ene manavitte lalitaangi || pa ||

Asamaana govugala kulavilladavanolu || a. Pa. ||

Magage maidunanaada magalige patiyaada |
Magaligaliyanaada aliyagaliyanaada || 1 ||

Magala magage maidunanaagi maavana |
Jagavariyalu konda kulagedi govugala || 2 ||

Attege vallabhanaada bhrutyarigaalaada |
Chittavolidu namma aadikeshavanolu || 3 ||
****

ಏನೆ ಮನವಿತ್ತೆ ಲಲಿತಾಂಗಿ  l 
ಅಸಮಾನ ಗೋವಳ ಕುಲವಿಲ್ಲದವನೊಳು ll 

ಮಗಗೆ ಮೈದುನನಾದ  l ಮಗಳಿಗೆ ಪತಿಯಾದ l ಮಗಳಿಗಳಿಯನಾದ  l ಅಳಿಯಗಳಿಯನಾದ ll 1 ll

ಮಗಳ ಮಗಗೆ ಮೈದುನನಾಗಿ  l ಮಾವನ ಜಗವರಿಯಲು ಕೊಂದ ಕುಲಗೇಡಿ ಗೋವಳ  ll 2 ll

ಅತ್ತೆಗೆ ವಲ್ಲಭನಾದ l ಭೃತ್ಯರಿಗಾಳಾದ l ಚಿತ್ತ ಒಲಿದು ಚೆನ್ನ ಆದಿಕೇಶವನೊಳು ll 3 ll

ಭಾವಾರ್ಥ — ನಿನಗೆ ಸರಿಸಮಾನನಲ್ಲದ ಈ ಗೋವಳ  ಗೋಪಾಲನಿಗೆ ಏಕಮ್ಮ ನೀನು ಮನವನ್ನಿತ್ತೆ  ಲಕ್ಷ್ಮೀ? 

(1)
ಮಗಗೆ ಮೈದುನನಾದ —  ನರಕಾಸುರ ಮತ್ತು ಸೀತೆ ಭೂದೇವಿಯ ಮಕ್ಕಳು. ಭೂದೇವಿಯು ವಿಷ್ಣುವಿನ ಹೆಂಡತಿಯೂ ಹೌದು. ಆಗ ನರಕಾಸುರನು ವಿಷ್ಣುವಿನ ಮಗನೂ ಆದಂತಾಯಿತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ನರಕಾಸುರನಿಗೆ ಮೈದುನ - ಭಾವನಾದಂತಾಯಿತು. 

ಮಗಳಿಗೆ ಪತಿಯಾದ — ಭೂದೇವಿಯ ಮಗಳಾದ ಸೀತೆ ವಿಷ್ಣುವಿಗೂ ಮಗಳಾದಂತಾಯ್ತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಪತಿಯಾದಂತಾಯ್ತು. 

ಮಗಳಿಗೆ ಅಳಿಯನಾದ - ವಿಷ್ಣುವಿನ ಪಾದದಿಂದ ಗಂಗೆ ಉದ್ಭವವಾದ್ದರಿಂದ ವಿಷ್ಣುವಿಗೆ ಮಗಳಾದಂತಾಯ್ತು, ಅವಳು ಸಮುದ್ರರಾಜನ ಪತ್ನಿಯಾಗುತ್ತಾಳೆ. ಸಾಗರನ ಮಗಳು ಲಕ್ಷ್ಮಿಯನ್ನು ವಿಷ್ಣು ಕೈ ಹಿಡಿದದ್ದುಂದ ಸಾಗರನಿಗೆ ಅಳಿಯನಾದಂತಾಯಿತು.ಆಗ ಮಗಳಾದ ಗಂಗೆಗೂ ಅಳಿಯನಾದಂತಾಯ್ತು. 

ಅಳಿಯಗಳಿಯನಾದ — ವಿಷ್ಣುವಿನ ಮಗಳಾದ ಗಂಗೆಯನ್ನು ಸಾಗರ ಮದುವೆ ಯಾದ್ದರಿಂದ ಸಾಗರ ವಿಷ್ಣುವಿಗೆ ಅಳಿಯನಾದ, ಸಾಗರನ ಮಗಳು ಲಕ್ಷ್ಮಿಯನ್ನು ತಾನು ಮದುವೆಯಾದ್ದರಿಂದ ಅಳಿಯನಾದ ಸಾಗರನಿಗೆ ವಿಷ್ಣುವು ಅಳಿಯನಾದಂತಾಯಿತು. 

(2)
ಮಗಳ ಮಗಗೆ ಮೈದುನನಾಗಿ —  ಲಕ್ಷ್ಮಿ, ಚಂದ್ರ ಇಬ್ಬರೂ ಸಾಗರನ ಮಕ್ಕಳು. ವಿಷ್ಣುವಿನ ಪುತ್ರಿ ಗಂಗೆಯು ಸಾಗರನ ಹೆಂಡತಿಯಾದ್ದರಿಂದ ಚಂದ್ರ ಅವಳಿಗೂ ಮಗನಾದಂತಾ ಯಿತು. ಚಂದ್ರನ ಸಹೋದರಿಯಾದ ಲಕ್ಷ್ಮಿಯನ್ನು ವಿಷ್ಣುವು ಮದುವೆಯಾದ್ದರಿಂದ ವಿಷ್ಣುವು ಚಂದ್ರನಿಗೆ ಮೈದುನ = ಭಾವನಾದಂತಾಯಿತು. 

ಮಾವನ ಕೊಂದ ಕುಲಗೇಡಿ ಗೋವಳ—  ಮಾವನಾದ ಕಂಸನನ್ನು ಕೊಂದ ಕುಲಕಂಟಕನಾದ ಕೃಷ್ಣ .

(3)
ಅತ್ತೆಗೆ ವಲ್ಲಭನಾದ — ವಿಷ್ಣುವು ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಸೀತೆಯ ತಾಯಿಯಾದ ಭೂದೇವಿ ಅತ್ತೆಯಾಗಬೇಕು. ಆದರೆ ಭೂದೇವಿ ವಿಷ್ಣುವಿಗೆ ಹೆಂಡತಿಯೂ ಆದದ್ದರಿಂದ ಅತ್ತೆಗೆ ಗಂಡನಾದಂತಾಯ್ತು. 

ಭೃತ್ಯರಿಗಾಳಾದ — ಸೇವಕರಾದ ಪಾಂಡವರಿಗೆ ಬಂಡಿಯ ಬೋವನಾಗಿ ಕೆಲಸ ಮಾಡುವ ಸೇವಕನಾದ ಶ್ರೀಕೃಷ್ಣ .

ಮುಂಡಿಗೆಯು ಒಗಟಿನಂತಹ ವಿಶಿಷ್ಟವಾದ ರಚನೆ ಇದು. ಹರಿದಾಸರಲ್ಲಿ ಮುಂಡಿಗೆಗಳ ರಚನೆಯನ್ನು ಆರಂಭಿಸಿದ್ದು ಶ್ರೀ ಕನಕದಾಸರು.
(ಸಂಗ್ರಹ)
***

No comments:

Post a Comment