ಮಂಗಲಂ ಜಯ ಮಂಗಲಂ
ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲ
ವಿಂದದಿ ಧರಿಸಿದ ಮುಕುಂದನಿಗೆ | ೧ |
ರಥನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿಕೇಶವರಾಯಗೆ | ೩ |
***
ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲ
ವಿಂದದಿ ಧರಿಸಿದ ಮುಕುಂದನಿಗೆ | ೧ |
ರಥನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿಕೇಶವರಾಯಗೆ | ೩ |
***
Mangalam jayamamgalam||pa||
Andhakananujana kandana tandeya kondana Siradali nindavana |
Chendadi padedana nandaneyalanolavindadi dharisida mukundanige | 1 |
Rathavanadari surapathadali tiruguva sutanige sapavanittavana |
Katiyannu tadedana satiya janini suta satiyaranalida caturanige | 2 |
Hariya magana Sira haridana tandeya hiriya magana tammana pitana |
Baradi bakshisuvana Siradali natisida varakagineleyadikesavarayage | 3 |
***
ಕನಕದಾಸರ ಮಂಗಲ
🍀🍀🍀🍀🍀🍀
ಕನಕದಾಸರ ವಿಶಿಷ್ಟ ಶೈಲಿಯೆಂದರೆ ಅವರು ಬಳಸುವ ಪದ ಸಾಹಿತ್ಯದಿಂದ ಹಲವಾರು ಕಥೆ ನೆನಪಿಸುವುದು.
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |
ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ |೩ |
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ !!
***
explanation by narahari sumadhwa
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |
ವಿವರಣೆ:.
ಅಂಧಕನ - ಧೃತರಾಷ್ಟ್ರನ
ಅನುಜನ - ಅನುಜ ಪಾಂಡುವಿನ
ಕಂದನ - ಕಂದನಾದ ಯುಧಿಷ್ಠಿರನ
ತಂದೆಯ - ಪಿತ ಯಮಧರ್ಮನ
ಕೊಂದನ - ಕಾರ್ಯವನ್ನು ತಡೆದ ಶಿವನ (ಮಾರ್ಕಂಡೇಯನ ಎಳೆದೊಯ್ಯಲು ಬಂದ ಯಮನ ವಾಪಸ್ಸು ಕಳುಹಿದ ಶಿವ)
ಶಿರದಲಿ ನಿಂದವನ - ತಲೆಯಲ್ಲಿ ಆಶ್ರಿತ ಚಂದ್ರನ
ಚಂದದಿ ಪಡೆದನ - ಸಮುದ್ರಮಥನದಿ ಪಡೆದ ಸಮುದ್ರರಾಜನ (ವರುಣನ)
ನಂದನೆಯಳನು - ಪುತ್ರಿ ಲಕ್ಷ್ಮೀ ದೇವಿಯ
ಒಲವಿಂದದಿ - ಒಲವಿನಿಂದ
ಧರಿಸಿದ ಮುಕುಂದನಿಗೆ - ವಿವಾಹವಾದ ಮುಕುಂದ ಶ್ರೀಹರಿಗೆ ಮಂಗಲಂ|
ಇಲ್ಲಿ ನೇರವಾಗಿ ಮುಕುಂದನಿಗೆ ಮಂಗಳವೆನ್ನಬಹುದಿತ್ತು. ಆದರೆ ಇಲ್ಲಿ ಮಾರ್ಕಂಡೇಯನ ಚಿರಂಜೀವಿತ್ವ ನೀಡಲು ಶಿವನ ಕಾರ್ಯ, ಸಮುದ್ರಮಥನದಿ ಜನಿಸಿದ ಲಕ್ಷ್ಮೀದೇವಿಯ ಸ್ತುತಿ, ವಿವರಿಸಿ ಮುಕುಂದನಿಗೆ ಮಂಗಳವೆಂದಿದ್ದಾರೆ.
ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |
ರಥವನಡರಿ ಸುರಪಥದಿ ತಿರುಗುವ - ಸುರಮಾರ್ಗದಿ ಮೇರುಪರ್ವತವ ಸುತ್ತುವ ಸೂರ್ಯನ
ಸುತನಿಗೆ - ಕರ್ಣನಿಗೆ
ಶಾಪವನಿತ್ತವನ - ಪರಶುರಾಮನ
ಖತಿಯನು ತಡೆದನ - ದರ್ಪವನ್ನು ತಡೆದ (ಲೋಕದೃಷ್ಟಿಯಿಂದ ದರ್ಪ ತೋರಿದ ಪರಶುರಾಮ) ರಾಮನ
ಸತಿಯ - ಸೀತಾದೇವಿಯ
ಜನನಿ - ಭೂಮಾತೆಯ
ಸುತ - ನರಕಾಸುರನ
ಸತಿಯರನಾಳಿದ ಚತುರನಿಗೆ - ಬಳಿಯಿರಿಸಿಕೊಂಡಿದ್ದ ೧೬೧೦೦ ನಾರಿಯರ ವಿವಾಹವಾದ ಶ್ರೀಕೃಷ್ಣನಿಗೆ |
ಮಂಗಲಂ
ಇಲ್ಲಿ ಪರಶುರಾಮಾವತಾರ, ಕರ್ಣನಿಗೆ ಶಾಪ, ರಾಮಾವತಾರ, ಸೀತಾವತಾರ, ಕೃಷ್ಣನ ೧೬೧೦೦ ಕಲ್ಯಾಣ ಇಷ್ಟೂ ಕಥೆಯನ್ನು ಕೆಲವೇ ಪದಗಳ ಜೋಡಣೆಯಿಂದ ತಿಳಿಸಿದ್ದಾರೆ.
ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿ ಕೇಶವರಾಯಗೆ
ಮಂಗಲಂ ಜಯ ಮಂಗಲಂ
ವಿವರಣೆ
ಹರಿಯ ಮಗನ - ಹರಿಯ - ಸೂರ್ಯನ ಮಗನ - ಕರ್ಣನ
ಶಿರ ತರಿದವನ - ಶಿರವನ್ನು ಬೀಳಿಸಿದ ಅರ್ಜುನನ
ತಂದೆಯ - ಪಾಂಡುವಿನ
ಹಿರಿಯ ಮಗನ - ಧರ್ಮರಾಜನ
ತಮ್ಮನ - ಭೀಮಸೇನದೇವರ
*ಪಿತನ * - ಪಿತ ವಾಯುದೇವರು ನಿಯಾಮಕರಾಗಿರುವ ಗಾಳಿಯನ್ನು
ಭರದಿ ಭುಂಜಿಸುವನ - ವಾಯು ಭಕ್ಷಕನಾದ ಸರ್ಪದ ಅರ್ಥಾತ್ ಕಾಲೀಯನ
ಶಿರದಲ್ಲಿ ನಟಿಸಿದ - ಶಿರದಲ್ಲಿ ಅದ್ಭುತ ನಾಟ್ಯವನ್ನು (ಕಾಳಿಂಗಮರ್ದನ) ಮಾಡಿದ
ವರಕಾಗಿನೆಲೆಯಾದಿ ಕೇಶವರಾಯಗೆ
- ಕನಕದಾಸರ ಆರಾಧ್ಯದೇವ ಆದಿದೇವನಿಗೆ
ಮಂಗಲಂ ಜಯ ಮಂಗಲಂ
ಲೇಖನ - ನರಹರಿ ಸುಮಧ್ವ
ಆಧಾರ - ಶ್ರೀ ಚತುರ್ದಶಿ ವೇದವ್ಯಾಸಾಚಾರ್ಯರ ಅರ್ಥ ಚಿಂತನೆ
-narahari sumadhwa
***
ಶ್ರೀ ಕನಕದಾಸಾರ್ಯರ ಜಯಂತಿ ನಿಮಿತ್ತ ಮುಂಡಿಗೆಯನ್ನು ತಿಳಿಯುವ
ಅತ್ಯಲ್ಪ ಪ್ರಯತ್ನ ಸೇವಾರೂಪದಲ್ಲಿ
ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ
ಧರಿಸಿದ ಮುಕುಂದನಿಗೆ
ವಿವರಣೆ
ಅಂಧಕನ / ಧ್ರುತರಾಷ್ಟ್ರನ
ಅನುಜನ / ಪಾಂಡುರಾಜನ
ಕಂದನ / ಯುಧಿಷ್ಠಿರನ
ತಂದೆಯ / ಯಮಧರ್ಮರಾಯನನ್ನು
ಕೊಂದನ / ಮಾರ್ಕಾಂಡೇಯನಿಗಾಗಿ ಎಳೆಯಲು ಬಂದ ಯಮನನ್ನು ತ್ರಿಶೂಲದಿಂದ ತಿವಿಯಲು ಹೋದ ರುದ್ರದೇವರ
ಶಿರದಲಿ ನಿಂದವನ / ಶಿರದಲ್ಲಿರುವ ಚಂದ್ರನ
ಚೆಂದದಿ ಪಡೆದನ / ಸಮುದ್ರಮಥನ ಕಾಲದಲ್ಲಿ ಪಡೆದ ಸಮುದ್ರನ( ವರುಣ)
ನಂದನೆಯಳ / ಪುತ್ರಿಯಾದ ಶ್ರೀ ಮಹಾಲಕ್ಷ್ಮೀದೇವಿಯನ್ನು
ಧರಿಸಿದ / ವಕ್ಷಸ್ಥಳದಲ್ಲಿ ಧರಿಸಿರುವ ಶ್ರೀಮುಕುಂದಗೆ ಮಂಗಲಂ|
ರಥವನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ
ವಿವರಣೆ -
ರಥವನಡರಿ ಸುರಪಥದಿ ತಿರುಗುವ/ ಮೇರುಪರ್ವತವನ್ನು ಸುತ್ತುವ ಸೂರ್ಯನ
ಸುತನಿಗೆ / ಕರ್ಣನಿಗೆ
ಶಾಪವಿತ್ತವನ / ಪರಶುರಾಮದೇವರ
ಖತಿಯನು ತಡೆದವನ/ ಮಂದದೃಷ್ಟಿಯಿಂದ ದರ್ಪವನ್ನು ಹೋಗಲಾಡಿಸಿದ ಶ್ರೀ ರಾಮಚಂದ್ರದೇವರ
ಸತಿಯ / ಸೀತಾದೇವಿಯ
ಜನನಿ/ ಭೂಮಿಯ
ಸುತ / ನರಕಾಸುರನ
ಸತಿಯರನಾಳಿದ / ನರಕಾಸುರನು ಬಂಧಿಸಿಟ್ಟಿದ್ದ
೧೬,೧೦೦ ಜನ ರಾಜಕುಮಾರಿಯರನ್ನು ವಿವಾಹವಾದ
ಶ್ರೀ ಕೃಷ್ಣನಿಗೆ ಮಂಗಲಂ
ಹರಿಯ ಮಗನ ಶಿರ ತರಿದವನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿ ನೆಲೆಯಾದಿ ಕೇಶವರಾಯಗೆ
ಮಂಗಲಂ ಜಯ ಮಂಗಲಂ
ವಿವರಣೆ...
ಹರಿಯ ಮಗನ / ಇಲ್ಲಿ ಹರಿ ಅಂದ್ರೆ ಸೂರ್ಯ ಎಂಬರ್ಥದಲ್ಲಿ ಸೂರ್ಯನ ಮಗನಾದ ಕರ್ಣನ
ಶಿರ ತರಿದವನ / ಶಿರವನ್ನು ಅಂಜಲೀಕಾಸ್ತ್ರದಿಂದ ತರಿದಂಥ ಅರ್ಜುನನ
ತಂದೆಯ / ಪಾಂಡುರಾಜನ
ಹಿರಿಯ ಮಗನ/ ಧರ್ಮರಾಜನ
ತಮ್ಮನ / ಭೀಮಸೇನದೇವರ
ಪಿತನ / ತಂದೆಯಾದ ವಾಯುದೇವರು ಅರ್ಥಾತ್ ವಾಯುವನ್ನು
ಭರದಿ ಭುಂಜಿಸುವನ/ ವಾಯು ಭಕ್ಷಕನಾದ ಕಾಲಿಯ ಸರ್ಪದ
ಶಿರದಲ್ಲಿ ನಟಿಸಿದ / ಶಿರದಲ್ಲಿ ಅದ್ಭುತ ನಾಟ್ಯವನ್ನು ಮಾಡಿದ
ವರಕಾಗಿನೆಲೆಯಾದಿ ಕೇಶವಾಭಿನ್ನ ಶ್ರೀಕೃಷ್ಣನಿಗೆ
ಮಂಗಲಂ ಜಯ ಮಂಗಲಂ
🙏🙇♀️ ಜೈ ಜೈ ಕೃಷ್ಣ ಹರೇ-
(received in WhatsApp)
*****
No comments:
Post a Comment