Friday 27 December 2019

ಕೆಲವು ಕಾಲಗಳ ಹಿಂದೆ ಗ್ರಾಮದ ankita madhwesha krishna ಶಿರಿಯಾಳ ಷಷ್ಠಿ ಕಥೆ KELAVU KAALAGALA HINDE GRAAMADA SHIRIYALA SHASHTI STORY



ಶಿರಿಯಾಳ  ಷಷ್ಠಿ ಕಥೆ


ಕೆಲವು ಕಾಲಗಳ ಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನಸಂಸಾರ
  ಇರುತಿರಲು| ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ
ಅವ್ವ ತಾತ ಕೂಡ ಇರತಿರಲು||ಪಲ್ಲ||

ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರು ರಭಸದಿ ತೂಬಿ
ನಿಂದ ಹರಿಯೆ| ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತ
ನಾಗಿರುತಿರಲು| ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲ
ಮಗನ ತೂಬಿನಲ್ಲಿ ಮಲಗಿಸೆ| ನೀರಿನ ರಭಸಕಡಮೆಯಾಗು
ವುದೆಂದು ನಿರ್ಧಾರವಾಗಿ ಪೇಳಲು||೧||

ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ ಮಾಡುತ್ತಿರೆ
  ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನನ್ನ
ಎತ್ತಿಕೊಂಡು| ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗುವನ್ನ
ತೂಬಿನಲ್ಲಿ ಮಲಗಿಸೆ| ಹರಿಯುತಿದ್ದ ನೀರಿನ ರಭಸವು ಹಿಂದ
ಲೆ ಕಡಮೆಯಾಗಲು||೨||

 ಮನದಲ್ಲಿ ಚಿಂತಿಸುತ ಬಂದನು ತಾನು ವಿಷಾದ ಮನಸಿನಿಂದ
 ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿತಂದು
  ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡು
ತಿರೆ| ಹಿಂದಲೆ ಓಡಿಬಂದನು ಶಿರಿಯಾಳ ಅಮ್ಮನಕರೆಗೆ
ಓಗೊಟ್ಟು||೩||

 ಶ್ರಾವಣಮಾಸದಶುಧ್ಧ ಅಷ್ಟಮಿ ದಿನದಿಶಿರಿಯಾಳಷಷ್ಟಿ ಎಂದು| ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನ ಗೊಂಬಿ ಮಲ
ಗಿಸಿ| ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂ
ಜಿಸಿ| ಹಣ್ಣು ಕಾಯಿ ನೈವೇದ್ಯಮಾಡಿ ಸಂಭ್ರಮದಿ ಹಬ್ಬ ಆಚ
ರಿಸಿ||೪||

 ಮೊಸರು  ಅನ್ನವು ಉಪ್ಪಿನಕಾಯಿ ಗಿಲಗಂಚಿಗಳನೆ ಮಾಡಿ
 ಶ್ಯಾವಿಗೆ ಪಾಯಸದೊಡನೆ ಕೆಲವು  ಮನೆಗಳಿಗೆ ಬೀರಿಸಬೇ
ಕೆಂದು| ಮದುವೆ ಆದ ಹೆಣ್ಣುಮಕ್ಕಳು   ತಪ್ಪದೆ ಆಚರಿಸಬೇ
ಕೆಂದು| ಮಧ್ವೇಶಕೃಷ್ಣನ  ದಯವು ದೊರಕುವುದೆಂದು ಹಿರಿ
ಯರು ಶಿಸ್ತಿಲಿ ಪೇಳುವರು||೫||
***


 ಕೆಲವು ಕಾಲಗಳಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನ ಸಂಸಾರ
ಇರುತಿರಲು ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ ಅವ್ವ ತಾತ
ಇರುತಿರಲು||ಪಲ್ಲ||

ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರುರಭಸದಿ ತೂಬಿನಿಂದ ಹರಿಯೆ
 ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತರಾಗಿ ಇರುತಿರಲು
ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲಮಗನ ತೂಬಿನಲ್ಲಿ ಮಲಗಿಸೆ ನೀರಿನ ರಭಸವು ಕಡಿಮೆಯಾಗುವುದೆಂದು ನಿರ್ಧಾರವಾಗಿ
ಪೇಳಲು||೧||

 ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ  ಮಾಡುತ್ತಿರೆ
 ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನ ಎತ್ತಿಕೊಂಡು
 ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗವನ್ನು ತೂಬಿನಲ್ಲಿ ಮಲಗಿಸೆ
 ಹರಿಯುತಿದ್ದ ನೀರಿನ ರಭಸವು ಹಿಂದಲೆ ಕಡೆಯಾಗಲು||೨||

 ಮನದಲ್ಲಿ ಚಿಂತಿಸುತ ಬಂದನು  ತಾತನು ವಿಷಾದ ಮನಸಿನಿಂದ
ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿ ತಂದು
ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡುತಿರೆ
 ಹಿಂದಲೆ ಓಡಿ ಬಂದನುಶಿರಿಯಾಳ   ಅಮ್ಮನ ಕರೆಗೆ ಓ ಗೊಟ್ಟು||೩||

ಶ್ರಾವಣ ಮಾಸದ ಶುಧ್ಧ ಷಷ್ಟಿ ದಿನದಿ ಶಿರಿಯಾಳ  ಷಷ್ಟಿ ಎಂದು
 ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನಗೊಂಬಿ ಮಲಗಿಸಿ
ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂಜಿಸಿ
 ಹಣ್ಣು ಕಾಯಿ ನೈವೇದ್ಯ ಮಾಡಿ ಸಂಭ್ರಮದಿ ಹಬ್ಬ ಆಚರಿಸಿ||೪||

 ಮೊಸರು ಅನ್ನವು ಉಪ್ಟಿನಕಾಯಿ ಗಿಲಗಂಚಿಗಳನೆ ಮಾಡಿ
ಶ್ಯಾವಿಗೆ ಪಾಯಸದೊಡನೆ ಕೆಲವು ಮನೆಗಳಿಗೆ ಬೀರಿಸಬೇಕೆಂದು
 ಮದುವೆಯಾದ ಹೆಣ್ಣುಮಕ್ಕಳು  ತಪ್ಪದೆ ಆಚರಿಸಬೇಕೆಂದು
 ಮಧ್ವೇಶಕೃಷ್ಣನ  ದಯವು ದೊರಕುವುದೆಂದು ಹಿರಿಯರು ಶಿಸ್ತಿಲಿ
ಪೇಳುವರು||೫||
***


***

No comments:

Post a Comment