Friday, 27 December 2019

ಈತನೇ ಗುರು ರಾಘವೇಂದ್ರಾ ಖ್ಯಾತ ಕಾಣಿರೋ ankita lakshmipati vittala

ಈತನೇ ಗುರು ರಾಘವೇಂದ್ರಾ – ಖ್ಯಾತ ಕಾಣಿರೋ        || ಪ ||
ವಾತಮತದುಗ್ದಾಬ್ಧಿ ಚಂದ್ರ ಸು-ಖಾತಿಶಯಗಳ ನೀವ ನಿರುತ        || ಅ ||

ಹಿಂದೆ ಹೇಮಕಶ್ಯಪನ ಸುತ
ನೆಂದು ಕರೆಸಲು ಓಂ ನಮಃ ಶಿವ
ಎಂದು ಬರೆಯಲು ಹೇಳಲಾಪಿತನು
ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು
ತೋರೆಲವೊ ಸ್ಥಂಭದಿ ಇಂದು ನಿನ್ನನು
ಕಾವದೇವರನು ಎಂದೆನ್ನಲವನು
ಇಂದಿರೇಶನ ದ್ವಂದ್ವರೂಪವ
ಅಂದುತೋರಿದ ಮಹಿಮನೋ            || ೧ ||

ವ್ಯಾಸಮುನಿಯಾಗವತರಿಸಿ ಜೀ
ವೇಶರೊಂದೆಂಬ ಮಾಯಿಗಳ ಕು
ಭಾಷ್ಯಗಳೆಲ್ಲ ತಾ ಕೆಡಿಸಿ – ಸರ್ವಜ್ಞ ಶಾಸ್ತ್ರವ
ಲೇಸಿನಲಿ ಸಜ್ಜನಕೆ ಬೊಧಿಸಿ – ದುರ್ವಾದಿಗಳ ಸ
ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ
ಹರಿಪ್ರೀತಿಗೊಳಿಸಿ
ಕೇಶವನೆ ಪರನೆಂದು ಸಾರುತ
ದಾಶರಥಿನಿಜದಾಸ್ಯ ಪಡೆದ        || ೨ ||

ವರಹದಂಷ್ಟ್ರಯುಗಳ ಸು
ತೀರದಲಿರುವ ಮಂತ್ರಾಲಯದ ಸ್ಥಳದೀ
ಸುರರು ಮಾಡುವ ಪರಮ ಆರಾಧನೆಯ ಕೈಗೊಳ್ಳುತಾ
ತ್ರಿವಿಧರ್ಗೆತಕ್ಕ ವರಗಳನು ದಿನದಲ್ಲಿ ನೀಡುತ್ತ
ಜಗದೊಳು ಪುನೀತಾ
ಗುರು ಸುಧೀಂದ್ರಸುತೀರ್ಥರ ಸಿರಿ
ಕರಕಮಲ ಸಂಜಾತ – ಪ್ರೀತಾ            || ೩ ||

ಮೆರೆವ ದ್ವಾದಶನಾಮ ಮುದ್ರೆಯು
ಕರದಿ ದಂಡಕಮಂಡಲು ಶ್ರೀ
ತರಳ ತುಳಸಿ ಸರವು ಕೊರಳಲ್ಲಿ – ಶ್ರೀ
ಹರಿಯ ಧ್ಯಾನವು ನಿರುತ ಮಾಡುತ ಮನದಲ್ಲಿ
ಸುಕ್ಷೇತ್ರತೀರ್ಥಕ್ಕೆ ಸರಿಮಿಗಿಲು ಎನಿಸುತ್ತಲಿಹರಿಲ್ಲಿ
ಇವರ ಅಂಘ್ರಿಯಲೀ
ನಿರುತ ಸೇವೆಮಾಳ್ಪ ಜನರಿಗೆ
ಪರಮಸುಖಗಳನೇ ಕೊಡುವರಿಲ್ಲಿ        || ೪ ||

ಚತುರವಿಧ ಫಲಗಳನು ಕೊಡುತ
ಯತಿಶಿರೋಮಣಿ ನಾಮದಲಿ ಶ್ರೀ
ಪತಿಯು ತಾನೇ ಚಕ್ರರೂಪದಲೀ – ಇವರಲಿ ನಿಂತು
ಕೃತಿಯ ನಡೆಸುವ ಸರ್ವಕಾಲದಲೀ – ಈ ಮಹಿಮೆಯನು ನಾ
ತುತಿಸಬಲ್ಲೆನೆ ಅಲ್ಪಮತಿಯಲ್ಲೀ-
ಸದ್ಭಕ್ತಿಯಲೀ
ತುತಿಸುವರ ಪಾಲಿಸುವ ಲಕ್ಷ್ಮೀ
ಪತಿವಿಠ್ಠಲ ಸತ್ಕರುಣದಲ್ಲಿ            || ೫ ||
***

 ಶ್ರೀ ಲಕ್ಷ್ಮೀಪತಿ ವಿಠ್ಠಲ 

ಅಂಕಿತ ಗುರುಗಳು : ಶ್ರೀ ಗುರು ಶ್ರೀಶ ವಿಠ್ಠಲರು 

ರಾಗ : ಶಂಕರಾಭರಣ ತಾಳ : ಅಟ್ಟ 


ಈತನೇ ಗುರುರಾಘವೇಂದ್ರಾ 

ಖ್ಯಾತ ಕಾಣಿರೋ ।

 ವಾತಮತ ದುಗ್ಧಾಬ್ಧಿ ಚಂದ್ರ 

ಸುಖಾತಿಯಶಗಳ ನೀವ ನಿರುತ ।। ಪಲ್ಲವಿ ।। 


ಹಿಂದೆ ಹೇಮಕಶ್ಯಪನ ಸುತನೆಂದು 

ಕರಸಲು ಓಂ ನಮಃ ಶಿವ ।

ಯೆಂದು ಬರೆಯಲು ಹೇಳಲಾ 

ಪಿತನು ನಾರೇಯಣನೆ ಪರ ।

ನೆಂದು ಬರೆಯಲು ರೋಷದಲಿ 

ಖಳನು ತೋರೆಲವೋ ಸ್ತಂಭದಿ ।।

ಯಿಂದು ನಿನ್ನನು ಕಾವ 

ದೇವರನೂ ಯೆಂದೆನ್ನಲವನೂ ।

ಇಂದಿರೇಶನ ದ್ವಂದ್ವ ರೂಪವ 

ಅಂದು ತೋರಿದ ಮಹಿಮನೊ ।। ಚರಣ ।। 


ವ್ಯಾಸ ಮುನಿಯಾಗವತರಿಸಿ । ಜೀ ।

ವೇಶರೊಂದೆಂತೆ೦ಬ ಮಾಯಿಗಳ । ಕು ।

ಭಾಷ್ಯಗಳಿಗೆಲ್ಲಾ ತಾ ಕೆಡಿಸೀ ಸರ್ವಜ್ಞ ।

ಶಾಸ್ತ್ರವ ಲೇಶಿನಲಿ ಸಜ್ಜನಕೆ । ಬೋ ।

ಧಿಸಿ ದುರ್ವಾದಿಗಳ । ಸ ।

ಚ್ಛಾಸ್ತ್ರವೆಂಬಸಿಯಲ್ಲಿ 

ಖಂಡ್ರಿಸಿ ಹರಿ ಪ್ರೀತಿ ಗೊಳಸೀ ।

ಕೇಶವನೆ ಪರನೆಂದು ಸಾರುತ ।

ದಾಶರಥಿ ನಿಜ ದಾಸ್ಯ ಪಡೆದ ।। ಚರಣ ।। 


ವರಹದಂಷ್ಟ್ರಜಯಳ । ಸುತೀರದ ।

ಲಿರುವ ಮಂತ್ರಾಲಯ ಸ್ಥಳದೀ ।

ವರ ಸುವೃಂದಾವನದಿ ರಾಜಿಸುತಾ ।

ಭೂಸುರರು ಮಾಡುವ ।

ಪರಮ ಆರಾಧನೆಯ ಕೈಕೊಳುತಾ ।।

ತ್ರಿವಿಧರ್ಗೆತಕ್ಕ ।

ವರಗಳನುದಿನದಲ್ಲಿ ನೀಡುತ್ತಾ ।

ಜಗದೊಳು ಪುನೀತಾ ।

ಗುರು ಸುಧೀಂದ್ರ ಸು ತೀರಥರ ಸಿರಿ ।

 ಕರ ಕಮಲ ಸಂಜಾತಾ ಪ್ರೀತಾ ।। ಚರಣ ।। 


ಮೆರೆವ ದ್ವಾದಶ ಮುದ್ರೆಯು ।

ಕರದಿ ದಂಡ ಕಮಂಡಲವು । ಶ್ರೀ ।

ತರುಳ ತುಲಸೀ ಸರವು ಕೊರಳಲ್ಲಿ ।

ಶ್ರೀ ಹರಿಯ ಧ್ಯಾನವು ।

ನಿರುತ ಮಾಡುವ ತನ್ನ ಮನದಲ್ಲಿ ।।

ಸುಕ್ಷೇತ್ರ ತೀರ್ಥಕೆ ।

ಸರಿಮಿಗಿಲು ಯೆನಿಸುತ್ತಲಿಹ್ಯದಿಲ್ಲಿ ।

ಇವರಂಘ್ರಿಯಲ್ಲಿ ।

ನಿರುತ ಸೇವೆಯ ಮಾಳ್ಪ ಜನರಿಗೆ ।

ಸುಖಗಳನೆ ಕೊಡುವಲ್ಲಿ ।। ಚರಣ ।। 


ಚತುರ ಫಲಗಳನು ಕೊಡುತಾ ।

ಯತಿ ಶಿರೋಮಣಿ ನಾಮದಲಿ । ಶ್ರೀ ।

ಪತಿಯು ತಾನೇ ಚಕ್ರ ರೂಪದಲೀ ।

ಇವರಲ್ಲಿ ನಿಂತೂ ।

ಕಟಿಯ ನಡೆಸುವ ಸರ್ವ ಕಾಲದಲೀ ।।

ಈ ಮಹಿಮೆಯನುನಾ ।

ತುತಿಸ ಬಲ್ಲೆನೆ ಅಲ್ಪ-

ಮತಿಯಲ್ಲೀ ಸದ್ಭಕ್ತಿಯಲ್ಲೀ ।

ತುತಿಸುವರ ಪಾಲಿಸುವ । ಲಕ್ಷ್ಮೀ ।

ಪತಿ ವಿಠ್ಠಲ ಸತ್ಕರುಣದಲ್ಲೀ ।। ಚರಣ ।।

****

No comments:

Post a Comment