Saturday, 4 December 2021

ಮಳೆಯ ದಯಮಾಡೊ ಶ್ರೀರಂಗ ನಿಮ್ಮ ಕರುಣೆ ankita helavana katte MALAYE DAYAMAADO SRIRANGA NIMMA KARUNE










ಹೆಳವನಕಟ್ಟೆ ಗಿರಿಯಮ್ಮ

ಮಳೆಯ ದಯ ಮಾಡೋ ಶ್ರೀರಂಗ 
ನಿಮ್ಮ ಕರುಣೆ ತಪ್ಪಿದರೆ ಉಳಿಯದೀ ಲೋಕ ||ಪ||

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ |
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ||
ತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡು 
ದೆಶೆದೆಶೆಗೆ ಬಾಯಿ ಬಿಡುತಿಹವಯ್ಯ ಹರಿಯೇ ||೧||

ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರು |
ಮಗಿಮಗಿದು ಪಾತ್ರೆಯಲಿ ನಾರಿಯರು |
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ 
ಬೇಗದಿಂದಲಿ ತರಿಸೋ ವೃಷ್ಟಿಯನು ಹರಿಯೇ ||೨||

ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ 
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೋ
ಸಂದೇಹವಿನ್ಯಾಕೆ ಹೆಳವನ ಕಟ್ಟೆ ರಂಗ ||೩||
***

maLeya daya mADO SrIraMga 
nimma karuNe tappidare uLiyadI lOka ||pa||
 
paSujAti hulle sAraMga mRugagaLu bahaLa |
hasidu bAyAri battida kerege baMdu ||
tRuSheyaDagade tallaNisi mUrCeyagoMDu 
deSedeSege bAyi biDutihavayya hariyE ||1||

dhageyAgi innu dravaguMdada bhAviya nIru |
magimagidu pAtreyali nAriyaru |
hagalella tarutiharu yOcaneya mADuta 
bEgadiMdali tarisO vRuShTiyanu hariyE ||2||
 
saMdu hOdavu jyEShTha AShADha SrAvaNa 
baMdide BAdrapada mAsavIga
iMdu puraMdarage hELi vRuShTiya tarisO
saMdEhavinyAke heLavana kaTTe raMga ||3||
***
ಮಳೆಯ ದಯಮಾಡೊ ರಂಗಯ್ಯ ನಿಮ್ಮ
ಕರುಣ ತಪ್ಪಿದರೆ ಉಳಿಯದೀ ಲೋಕ ಪ.

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆÀರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು
ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ 1

ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ2

ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ
ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ3
*****

ಮಳೆಯ ದಯಮಾಡೊ ರಂಗಯ್ಯ ನಿಮ್ಮ
ಕರುಣ ತಪ್ಪಿದರೆ ಉಳಿಯದೀ ಲೋಕ || ಪ ||

ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು
ದೆಸೆ ದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ || ೧ ||

ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ || ೨ ||

ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ
ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ || ೩ ||
**********

1 comment:

  1. ಸಂಗೀತ ಕಾಖಂಡಕಿಯವರು ಹಾಡಿರುವ ಈ ಕೃತಿ ಇವತ್ತು ರೇಡಿಯೋದಲ್ಲಿ ಪ್ರಸಾರ ಮಾಡಿದರು.

    ReplyDelete