Tuesday, 23 November 2021

ಕೋಲು ಕೋಲೆನ್ನ ಕೋಲು ತಮನ ಕೊಂದನ ಕೋಲೆ ankita hayavadana KOLU KOLENNA KOLU TAMANA KONDANA KOLE



ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲೆ||pa||

ತಮನ ಕೊಂದನ ಕೋಲೆ ಕಮಠನಾದನ ಕೋಲೆ
ಕ್ಷಮೆಯನೆತ್ತಿದನ ಕೋಲೆ ಕೋಲು
ಕಮನೀಯ ನರಸಿಂಹರೂಪನಾದನ ಕೋಲೆ
ಸುಮುಖ ವಾಮನನ ಕೋಲೆ ||1||

ಪರಶುರಾಮನ ಕೋಲೆ ರಘುಕುಲದಲುದಿಸಿ ದಶ-
ಶಿರನ ಕೊಂದವನ ಕೋಲೆ ಕೋಲು
ಸಿರಿಕೃಷúರಾಯನ ಸುಕೋಲೆ ಬುದ್ಧನ ಕೋಲೆ
ತುರಗವೇರಿದನ ಕೋಲೆ ||2||

ವಾದಿರಾಜನಿಗೊಲಿದು ಸೋದೆಪುರದಿ ನಿಂದು
ಮೋದಿ ತ್ರಿವಿಕ್ರಮನ ಕೋಲೆ ಕೋಲು
ಕಾದಿ ಖಳರನು ಕೊಂದ ವೇದಗಳ ತಂದ ವಿ
ನೋದಿ ಹಯವದನ ಕೋಲೆ ||3||
*******

No comments:

Post a Comment