Tuesday 31 December 2019

ಸತತ ಮಾರ್ಗದಿ ಸಂತತ ಸೇವಿಪರಿಗೆ ankita gopala vittala SATATA MARGADI SANTATA SEVIPARIGE






ಸತತ ಮಾರ್ಗದಿ ಸಂತತ ಸೇವಿಪರಿಗೆ । ಅತಿ
ಹಿತದಲಿ ಮನೋರಥವ ಕೊಡುವೆನೆಂದು । ।।ಪ ।।
ರಥವಾನೇರಿದ ರಾಘವೇಂದ್ರ । ಸದ್ಗುಣಗಳ ಸಾಂದ್ರ ।।ಅ.ಪ।।

ಚತುರ ದಿಕ್ಕು ವಿದಿಕ್ಕುಗಳಲ್ಲಿ । ಚರಿಪಾಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ । ವರವಾ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ।।೧।।

ಅತುಳ ಮಹಿಮಾನಾ ದಿನದಲ್ಲಿ ।ದಿತಿಜಾವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ । ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಭಾದೆಗಳು
ಅತಿಶಯವಿರುತಿರೆ ಪಿತನ ಭಾದೆಗೆ ಮ
ನ್ಮಥ ಪಿತನೊಲಿಸಿದ ಜಿತ ಕರುಣದಲಿ ।।೨।।

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ । 
ಯತಿರಾಘವೇಂದ್ರ ಗುರುರಾಘವೇಂದ್ರ
ಪತೀತರೋದ್ಧಾರಿಯೇ ಪಾವನಕಾರಿಯೇ ।
ಕರಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವಿಠಲ ಗೋಪಾಲವಿಠಲ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ।।೩।।
****


ರಾಗ : ಮೋಹನ  ತಾಳ : ಆದಿ (raga, taala may differ in audio)

No comments:

Post a Comment