Saturday, 11 December 2021

ಚೆಲ್ವೇರಾರತಿಯ ತಂದೆತ್ತಿರೆ ಹುಟ್ಟಿದಳಾ ಕ್ಷೀರ ankita bheemesha krishna CHELVERAARATIYA TANDETTIRE HUTTIDALAA KSHEERA



ಚೆಲ್ವೇರಾರತಿಯ ತಂದೆತ್ತಿರೆ ||

ಹುಟ್ಟಿದಳಾ ಕ್ಷೀರಸಾಗರದಲಿ ಸ-
ಮಸ್ತ ಜನರಿಗೆ ಸುಖವ ನೀಡುತ
ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ
ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ ||

ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-
ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ
ತಿದ್ದಿ ಬೈತಲು ಜಡೆಬಂಗಾರ ರಾಗಟೆ
ಪದ್ಮನಾಭನ ರಾಣಿ ಮಾಲಕ್ಷ್ಮಿಗೆ ||

ಸಣ್ಣ ಮುತ್ತಿನ ವಾಲೆ ಸರಪಳಿ ಚಳತುಂಬು
ಚಿನ್ನದ ಸರಿಗೆ ಮೋಹನ್ನಮಾಲೆ
ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ
ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ ||

ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ
ನಳಿತೋಳಿನಲಿ ನಾಗಮುರಿಗೆ ವಂಕಿ
ಗಿಳಿಯು ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು
ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ ||

ಗರುಡವಾಹನನ್ಹೆಗಲಿಳಿದು ಶ್ರೀನಾಥನ
ಹರಡಿ ಕಂಕಣ ಕರವ್ಹಿಡಿದುಕೊಂಡು
ಮುಡಿದ ಮಲ್ಲಿಗೆ ಪಾರಿಜಾತಗಳುದುರುತ
ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ ||

ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ
ಆದರದಿಂದೆನ್ನ ಮನೆಗೆ ಬಂದು
ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ-
ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
***

Chelveraratiya tandettire ||pa||

Huttidala kshirasagaradali sa-
Masta janarige sukava niduta
Sreshtharolage jeshthadevi srinathana
Pattadarasi muddu malakshmige ||1||

Muddu morege takka mukurya bulaka-
Nitta vajrada bugudi vaiyaradinda
Tiddi baitalu jadebangara ragate
Padmanabana rani malakshmige ||2||

Vale sarapali chalatumbu
Chinnada sarige mohannamale
Kannakadige hacchi kasturi kumkuma
Chennara cheluve sri malakshmige||3||

Selenaduvige takka biliya pitambara
Nalitolinali nagamurige vanki
Kamala dvarya haradi kamkananittu
Kaleya suriva celve malakshmige ||4||

Garudavahananhegalilidu srinathana
Haradi kankana karavhididukondu
Mudida mallige parijatagaluduruta
Nadedu baruvo muddu malakshmige ||5||

Padadi ruli gejje nada jenkarisuta
Adaradindenna manege bandu
Sridhara bimesakrushnanedeya myalvi-
Nodadi kulitidda malakshmige ||6||
***

No comments:

Post a Comment