ರಾಗ - : ತಾಳ -
ವಿಜಯರಾಯ ಸುಜನಗೇಯಾ l
ಅಜ ಮನಸಿಜನಯ್ಯ ಪ್ರೀಯಾ ll ಪ ll
ನಿಜ ಸುಜ್ಞಾನ ಕೊಡಿಸು ಜೀಯಾ ಪವ l
ನಜ ಮತ ಪುಣ್ಯಕಾಯಾ ll ಅ ಪ ll
ನಿಲ್ಲದೆ ನಿಜವ ತಿಳಿಯ ಹೋಗಿ l
ವಲ್ಲಭ ಶ್ರೀಹರಿಯೆಂದು ಸಾರಿ ll
ತಾಳ ತಟ್ಟಿ ಭವವ ಮೆಟ್ಟಿ l
ಶ್ರೀಲೋಲನವಲಿಸಿ ಮೆರೆದೆ ll 1 ll
ತತ್ವವಾದ ಮತದಿ ಪ್ರೀತಿ l
ನಿತ್ಯ ಮಧ್ವರಲ್ಲಿ ಭಕುತಿ ll
ಸತತ ವಿಜಯವಿಟ್ಠಲನ್ನ l
ಸತ್ಕೃತಿಯಲಿ ಕೀರ್ತಿಸಿದೆ ll 2 ll
ನಿನ್ನ ಧ್ಯಾನ ಮನನವಾಗೆ l
ಮನ್ನಿಸೆಮಗೆ ಅನ್ಯ ದೈವಾ ll
ಸನ್ನುತ ಮೋಹನ್ನವಿಠಲ l
ತನ್ನರಮನೆ ತೋರಿ ಪೊರೆವಾ ll 3 ll
***
No comments:
Post a Comment