ಶ್ರೀ ನರಸಿಂಹವಿಠಲಾಂಕಿತರಾದ ಹರಿದಾಸಿನಿ ಸುಂದರಬಾಯಿ ವಿರಚಿತ
ರಂಗೋಲಿ ಹಾಕುವ ಪದ
( ಸಾಂಪ್ರದಾಯಿಕ ಧಾಟಿ )
ರಂಗಾ ನೀ ಒಲಿಯೆಂಬ ರಂಗೋಲಿಯ ರಚಿಸಿರೆ
ಸಂಭ್ರಮದಿಂದ ಸಖಿಯರೆಲ್ಲಾ॥ಪ॥
ಶೃಂಗಾರ ಮಂಟಪದಿ ಅಂದದಿ ಸಾರಿಸಿ ಚಂದುಳ್ಳ ಪದ್ಮವ ರಂಗುರಂಗಿಲೆ ಬಿಡಸಿ॥ಅ.ಪ॥
ಎಡಕೆ ಶಂಖವ ರಚಿಸಿ ಬಲಕೆ ಚಕ್ರವ ರಚಿಸಿ
ನಡುಮಧ್ಯ ಹೃದಯಕಮಲವ ರಚಿಸಿ
ಬೆಳಗುವ ಸೂರ್ಯ ಚಂದ್ರರ ಬದಿಗಿಟ್ಟು
ಮುದದಿಂದ ಗರುಡ ಶೇಷಾದಿ ಚಿತ್ರವ ಬರಿವೆ॥೧॥
ಬದಿಯಲ್ಲೆ ಗದೆ ಪದ್ಮ ಗಧಾಭೇರಿಯನಿಟ್ಟು
ಮಧುರ ಸ್ವರ ನುಡಿಸೊ ಕೊಳಲ ರಚಿಸಿ
ಅದರ ಕೆಳಗೆ ಕಾಮಧೇನು ಕಲ್ಪವೃಕ್ಷ
ಮುದದಿಂದ ಗೋಪದ್ಮ ಚಿತ್ರವ ರಚಿಸಿ॥೨॥
ಸಾಲು ಸಾಲಿನಲ್ಲಿ ಪದುಮನಾಭನ ಪಾದ
ಪರಮ ಸಂಭ್ರಮದಿಂದ ರಚಿಸುತಲಿ
ನಗಧರನರಸಿಯೇ ನಳನಳಿಸುವ ಪಾದ
ನರಸಿಂಹವಿಠಲನ ನಂಬಿ ನೆನೆಯುತ ಬರೆಯುವೆ॥೩॥
***
No comments:
Post a Comment