Monday, 11 October 2021

ವಿಜಯ ವಿಟ್ಠಲರಾಯಾ ಅಸ್ಮದ್ಗುರೋರ್ಗುರು ankita gurugopala vittala VIJAYA VITTALARAAYA ASADGURORGURU

 

Audio by Smt. Nandini Srpad

ಶ್ರೀ ಗುರುಗೋಪಾಲವಿಟ್ಠಲದಾಸರ ಕೃತಿ


ರಾಗ ಮಧ್ಯಮಾವತಿ       ಖಂಡಛಾಪುತಾಳ


ವಿಜಯವಿಟ್ಠಲರಾಯಾ । ಅಸ್ಮದ್ಗುರೋರ್ಗುರು ।

ವಿಜಯದಾಸರ ಪ್ರೀಯಾ । ಸ್ತುತಿ ಶ್ರವಣ ವಂದನೆ ।

ಭಜನೆ ತಿಳಿಯದೊ ಜೀಯಾ । ವಲಿದೆನ್ನ ಪಾಲಿಸು ।

ವಿಜಯಸಖ ಸುಖದಾಯ । ನಿರ್ಧೂತಮಾಯಾ ॥ ಪ ॥

ತ್ರಿಜಗದೀಶ್ವರ ತ್ರಿಗುಣವಿರಹಿತ ।

ವೃಜಜನಾರ್ತಿಹ ಸತತ ಶ್ರೀವಧು ।

ಭುಜಗಕುಚಸ್ಥಿತ ಕುಂಕುಮಾಂಕಿತ ।

ನಿಜ ಪದಾಂಬುಜ ತೋರು ಮನದಲಿ ॥ ಅ.ಪ ॥


ಯಿಂದ್ರ ಭವಮುಖ ಅಮರಾ । ತಾರಾನಿಕರದೊಳು ।

ಚಂದ್ರನಂತಿಹ ಧೀರಾ । ಪುರುಷೋತ್ತಮನೆ ಖಚ ।

ರೇಂದ್ರ ಸ್ಕಂದವಿಹಾರ । ಮಮಸ್ವಾಮಿ ಸತತ ಫ ।

ಣೀಂದ್ರ ಶೈಲಾಗಾರಾ । ಸೌಂದರ್ಯಸಾರಾ ॥

ಚಂದ್ರಮಂಡಲ ಮಧ್ಯವರ್ತಿಯೆ ।

ಚಂದ್ರಮಂಡಲನಿಭ ಶುಭಾನನ ।

ಚಂದ್ರ ಸೋದರಿರಮಣ ಯದುಕುಲ ।

ಚಂದ್ರ ಗೋಪಾಂಗನೇರ ಹೃದಯ ॥

ಚಂದ್ರ ಕಾಂತಿಮಣಿ ಸಮೂಹಕೆ ।

ಚಂದ್ರ ಮುನಿಹೃತ್ಕುಮುದ ಕೋರಕ ।

ಚಂದ್ರ ಚಕ್ರಗದಾಬ್ಜಧರ ಶತ ।

ಚಂದ್ರಪಾಣಿ ಸುಜನ ಚಕೋರಕೆ ॥

ಚಂದ್ರ ಚಂದ್ರಕುಲಾಬ್ಧಿಚಂದ್ರನೆ ।

ಚಂದ್ರರವಿ ಸ್ಮರನಂತೆ ಪ್ರಭೆ ಅಜ ।

ಚಂದ್ರಶೇಖರನುತ ಚರಣ ನಖ ।

ಚಂದ್ರ ಚಂದ್ರಿಕೆ ತೋರು ಹೃದಯದಿ ॥ 1 ॥


ಮೌನವ್ರತ ಶ್ರುತಿಧ್ಯಾನಾ । ಅಹರಹಾ ಜಪ ವ್ಯಾ ।

ಖ್ಯಾನ ಧರ್ಮಶೋಧನಾ । ಅಜಿತೇಂದ್ರಿಯರಿಗಹಿ ।

ಕಾನುಭಾವ ಕಾರಣ । ಡಾಂಭಿಕರಿಗಿವು ಫಲ ।

ವೇನು ಕೊಡವು ನಿದಾನ । ಮೋಕ್ಷಕಿವೆ ಕಾರಣಾ ॥

ನಾನು ಅಜಿತೇಂದ್ರಿಯನು ಡಾಂಭಿಕ ।

ಯೀ ನುಡಿದ ಸಾಧನದೊಳು ಯಿದೇನು ।

ಖೂನ ಕಂಡುಕೇಳಿ ಅರಿಯೆನು ।

ನೀನೊಲಿದು ರಕ್ಷಿಪ ಉಪಾಯವ ॥

ನೀನೇ ಬಲ್ಲೆ ವಿಭುವೇ ಸುಖಮಯ ।

ಮೀನ ಮಂದರಧರ ಧರಾಧರ ।

ಶ್ರೀನೃಸಿಂಹ ಮಾಣವಕ ಭಾರ್ಗವ ।

ಜಾನಕೀಪತಿ ಕೃಷ್ಣ ಬುದ್ಧನೆ ॥

ದೀನವತ್ಸಲ ಕಲ್ಕಿ ಹಯಮುಖ ।

ನಾನಾ ರೂಪಗುಣಾತ್ಮಕನೆ ಜಗ ।

ತ್ರಾಣ ಅಖಿಳ ಬಿಂಬಾಹ್ವಯ ಕ್ರಿಯ ।

ಜ್ಞಾನ ಪಾಲಿಸು ಶ್ರೀನಿಕೇತನ ॥ 2 ॥


ನಾನು ಮಾಡುವ ಗಾನಾ । ನಿನಗಿದೆ ವಿಚಿತ್ರ ಸು ।

ಸ್ನಾನಗಂಧ ಸುವಸನಾ । ಉಪವೀತ ಸೃಗ್ವಿಜ ।

ಮಾನದೇಹವೆ ಭವನ । ಮನಸಿನ ಬಯಕೆಗಳು ।

ನಾನಾಮಣಿಗಳಾಭರಣ । ದೀಪವು ಸುಜ್ಞಾನಾ ॥

ಕೋಣತ್ರಯ ಹೃದಯಾಬ್ಜಪೀಠವು ।

ಈ ನೆರೆದ ಜನರೆಲ್ಲಾವರಣವು ।

ಸ್ನಾನ ಕರ್ಮವು ತುಲಸಿ ಪುಷ್ಫವು ।

ಘ್ರಾಣೇಂದ್ರಿಯ ವಿಷಯ ಧೂಪವು ॥

ಪಾನ ಉಂಬನ್ನವೆ ನೈವೇದ್ಯವು ।

ಕಾಣಿಕೆ ಭಕ್ತಿಗತಿ ಪ್ರದಕ್ಷಿಣೆ ಶ ।

ಯಾನ ನಮನವು ನುಡಿಯು ಮಹಜಪ ।

ಏನು ಕಂಡರು ಕೇಳಿದುದು ಸುಖ ॥

ಶ್ರೇಣಿ ನಿನ್ನ ಪ್ರತಿಮೆಗಳು ಜಗ ।

ತ್ರಾಣ ಗುರುಗೋಪಾಲವಿಟ್ಠಲ ।

ಶ್ರೀನಿಕೇತನ ಸಾತ್ವತಾಂಪತೆ ।

ನೀ ನಗುತ ವಲಿದೆನ್ನ ಪಾಲಿಸು ॥ 3 ॥

***


No comments:

Post a Comment