Saturday 11 December 2021

ಹುಂಕಾರದಿಂದಲಿ ನಿತ್ಯ ಭೂತಗಳಟ್ಟಿ ಕಿಂಕರರನು ankita hayavadana HOONKAARADINDALI NITYA BHOOTAGALATTI KINKARNU


ಹುಂಕಾರದಿಂದಲಿ ನಿತ್ಯ ಭೂತಗಳಟ್ಟಿ

ಕಿಂಕರರನು ಸಲಹುತಲಿ

ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ

ಶಂಕರನಾರಾಯಣರ ಪ


ಪಡುವಿನ ಗಡಲಿನ ತಡಿಯಲಿ ವಿಪ್ರನ

ಗಡಣದ ನಡುವೆ ಕಾನನದಿ

ಒಡೆದುಮೂಡಿದ ದೇವರೊಡೆಯನ ಕೊಡಗಿಯ

ಮೃಡನಾರಾಯಣರ ವರ್ಣಿಸುವೆ1


ಕಪ್ಪುರಗೌರನ ಮೇಘಶ್ಯಾಮಳನಾ ಕಂ-

ದರ್ಪನ ವೈರಿಯಪಿತನ

ತಪ್ಪದೆ ನಂದಿ ಗರುಡವಾಹನನಾ-

ಗಿಪ್ಪದೇವನ ಕಂಡೆನಿಂದು 2


ಮಂಜುಳ ಸರ್ಪಾಭರಣನ ಕಂಡೆನು

ಮಂಜುಳ ಹಾರಪದಕನ

ಕುಂಜರ ಚರ್ಮವು ಪೊಂಬಟ್ಟೆವಸನವು

ಕೆಂಜೆಡೆ ಮಕುಟದ ಪ್ರಭೆಯು 3


ಮುರಹರ ಪುರಹರ ಗೌರೀಶಲಕ್ಷ್ಮೀಶ

ಗಿರಿವಾಸ ವೈಕುಂಠವಾಸ

ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ-

ತ್ರ್ಯರ ಮನ್ನಿಸುವ ಕರುಣದಲಿ 4


ವ್ರತದಿಂದ ನೋಡುವ ಯತಿಗಳ ಸಂದಣಿ

ಕ್ಷಿತಿಯನಾಳುವ ರಾಯರರ್ಥಿ

ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ

ಮತಿಗೆ ಮಂಗಳವೀವುತಿದಿದಕೊ 5


ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ

ಮಂಗಳಾರತಿಯ ಸಂಭ್ರಮವು

ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ

ಹಿಂಗದೆ ನೋಡುವ ಜನರು 6


ಅಯನದ ಶ್ರೀಬಲಿ ದೀಪದುತ್ಸಹಗಳು

ಭುವನದ ನಡುವೆ ಕಾನನದಿ

ಹಯವದನನೆಂಬ ಕೊಡಗಿಯ ದೇವನ

ನಯದಿ ನರರಿಗೆ ತುತಿಸಲಿನ್ನಳವೆ 7

***


No comments:

Post a Comment