Sunday, 7 November 2021

ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ankita hayavadana ENU SUKRUTAVA MAADIDALO YASHODE SHREENIDHIYAADA



On Krishna

ಏನು ಸುಕೃತವ ಮಾಡಿದಳೊ ಯಶೊದೆ ||ಪ||


ಶ್ರೀನಿಧಿಯಾದ ಕೃಷ್ಣನ್ನ ಕರದೆತ್ತಿ ಮುದ್ದಿಪಳಂತೆ ||ಅ ಪ||


ಗಂಗಾಜನಕಗೆ ಗಡಿಗೆ ನೀರನೆರೆವಳಂತೆ |

ಮಂಗಳಾಂಗಗೆ ಭಾಮೆ ಶೃಂಗರಿಪಳಂತೆ ||

ತುಂಗ ಭೂಧರನ ತೊಟ್ಟಿಲೊಳು ಮಲಗಿಪಳಂತೆ |

ಕಂಗಳಿಗಗೋಚರನ ಎತ್ತಿ ಮುದ್ದಿಪಳಂತೆ ||೧||


ಚತುರಾಸ್ಯನ ಪಿತನ ಸುತನೆಂದೆತ್ತುವಳಂತೆ |

ಶೃತಿವಿನುತನಿಗೆ ಜೋಗುಳವ ಪಾಡುವಳಂತೆ ||

ಶತರವಿತೇಜಗಾರತಿಯನೆತ್ತುವಳಂತೆ |

ಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ ||೨||


ಜಗವನೆತ್ತಿದವನ ಮಗುವೆಂದೆತ್ತುವ

ನಿಗಮಗೋಚರನ ಈಕ್ಷಿಸುವಳಂತೆ ||

ಅಗಣಿತ ಸದ್ಗುಣನ ಹಗ್ಗದಿ ಕಟ್ಟುವಳಂತೆ |

ಮಿಗೆ ನಿತ್ಯತೃಪ್ತನಿಗೆ ಪಾಲನೆರೆವಳಂತೆ ||೩||


ಬಹುಮುಖನಿಗೆ ಭಾಮೆ ಮುದ್ದನೀಡುವಳಂತೆ |

ಅಹಿತಲ್ಪನಿಗೆ ಹಾವತುಳಿದಿಯೆಂಬುವವಳಂತೆ |

ಬಹುದೈತ್ಯ ಸಂಹರಗೆ ಭಯವ ತೋರುವಳಂತೆ |

ಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ ||೪||


ಕಡಗೋಲ ನೇಣನು ಕೈಯೊಳಗೆ ಪಿಡಿದು |

ಪಾಲ್ಗಡಲೊಡೆಯ ದ್ವಾರಕಾನಿಲಯ ||

ಬಿಡದೆ ಸಲಹುವ ಹಯವದನ ಮೋಹನ ಮುದ್ದು |

ಉಡುಪಿಯ ಕೃಷ್ಣನ್ನ ಉಡಿಯೊಳೆತ್ತುವಳಂತೆ ||೫||

***


ರಾಗ: ಧನ್ಯಾಸಿ (ಬಾಗೆಶ್ರೀ)  ತಾಳ: ಝಂಪೆ (ಝಪ್) (raga tala may differ in audio)


pallavi


Enu sukRutava mADidaLO yashOde shrInidhiyAda kruSNanna karedu muddisuvaLante


caraNam 1


gangA janakanige gaDige nIrerevaLante mangaLAngage bhAme shrungarisuvaLante

tunga bhUdharanna toTTila tUguvaLante kangaLigagOcarana karedappikombaLante


caraNam 2


nagavanettidavana maguvendettuvaLante nigama gOcarana tA niTTipaLante

agaNita satvanna haggadi kaTTuvaLante mige nitya truptage pAlanerevaLante


caraNam 3


bahu mukhanige bhAme muddu koDuvaLante ahitalpanige hAva tuLidIyembaLante

mahA daityadallaNanige bahu bhayava tOruvaLante mahima narasimhage gummana karevaLante


caraNam 4


caturmukha pitana sutanendettuvaLante shruti vinutage jOguLa pADuvaLante

shata ravi tEja gAratiyanettuvaLante gata bhItanige bhAme rakSeyikkuvaLante


caraNam 5


kaDagOla nENa kaiyali piDidolavinda paDugaDalataDiya dvArake nilaya

biDade nelesida hayavadana muddu uDupina kruSNana uDiyoLettuvaLante

***


ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆ ಪ


ಗಂಗಾಜನಕನಿಗೆ ಗಡಿಗೆನೀರೆರೆವಳಂತೆಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ1


ನಗವನೆತ್ತಿದವನ ಮಗುವೆಂದೆತ್ತುವಳಂತೆನಿಗಮಗೋಚರನ ತಾ ನಿಟ್ಟಿಪಳಂತೆಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ 2


ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ 3


ಚತುರ್ಮುಖಪಿತನ ಸುತನೆಂದೆತ್ತುವಳಂತೆಶ್ರುತಿವಿನುತಗೆ ಜೋಗುಳ ಪಾಡುವಳಂತೆಶತರವಿತೇಜಗಾರತಿಯನೆತ್ತುವಳಂತೆಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ 4


ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದಪಡುಗಡಲತಡಿಯ ದ್ವಾರಕೆನಿಲಯಬಿಡದೆ ನೆಲೆಸಿದ ಹಯವದನ ಮುದ್ದುಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ5

***

No comments:

Post a Comment