Wednesday, 1 September 2021

ವ್ಯರ್ಥ ನುಡಿವುದೇನು ಅರ್ತು ಕೊಂಡಿರು ನೀ ಪ್ರಾಣಿ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ವ್ಯರ್ಥ ನುಡಿವುದೇನು | ಅರ್ತು ಕೊಂಡಿರು ನೀ ಪ್ರಾಣಿ ಪ 


ಮುಕ್ತಿ ಮಾರ್ಗರಿಯದೇ ಬ್ರಹ್ಮ ನಾನೆಂದು | ಭಕ್ತಿ ಬಿಡುದು ಕುಂದು 1 

ಕೂಲಿ ಮಾಡುತ ತಾ ಅರಸನೆಂದರ | ಇಳೆಯೊಳೆಲ್ಲರು ನಗರೇ ಪ್ರಾಣಿ 2 

ಈಸಲರಿಯದವ ತೆಪ್ಪ ಬಿಡಲು | ಘಾಸಿಯಾಗನೇ ಹೇಳು ಪ್ರಾಣಿ 3 

ಹೆಚ್ಚು ಕುಂದಿನ ಬಡಿವಾರಗಳಿಲ್ಲ | ಇಚ್ಚೆಯಗಳವಿಲ್ಲಾ ಪ್ರಾಣಿ 4 

ಮಹಿಪತಿ ಸ್ವಾಮಿಯ ಕಂಡಿರು ಹೀಂಗ ಸಿಹಿಗಂಡ ಮೂಕನ್ಹಾಂಗ ಪ್ರಾಣಿ 5

***


No comments:

Post a Comment