kruti by ವರದೇಶ ವಿಠಲರು varadesha vittala dasaru
ರಾಮ ಹರೇ ಹರೇ ರಾಮ ಹರೇ ಕೃಷ್ಣ
ಹರೇ ಹರೇ ಕೃಷ್ಣ ಹರೇ
ರಾಮ ರಾಮ ಹರೇ ಹರೇ ಹರೇ ಕೃಷ್ಣ
ಕೃಷ ಹರೇ ಹರೇ ಹರೇ ಪ
ಕೌಸಲ್ಯ ವರವಂಶೋದ್ಭವ ಸುರ
ಸಂಸೇವಿತ ಪದರಾಮ ಹರೇ
ಕಂಸಾದ್ಯಸುರರ ಧ್ವಂಸಗೈದಯದು
ವಂಶೋದ್ಭವ ಶ್ರೀ ಕೃಷ್ಣಹರೇ 1
ಮುನಿಮಖರಕ್ಷಕ ದನುಜರಶಿಕ್ಷಕÀ
ಘಣಿಧರ ಸನ್ನುತರಾಮಹರೇ
ಘನವರ್ಣಾಂಗ ಸುಮನಸರೊಡೆಯ ಶ್ರೀ -
ವನಜಾಸನ ಪಿತ ಕೃಷ್ಣ ಹರೇ 2
ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲುವಕ್ರಾಗಿದ್ದ ಬಲೆಯ ಕ್ಷಣದಲಿ
ಚಲುವೆಯ ಮಾಡಿದ ಕೃಷ್ಣ ಹರೇ 3
ಹರಧನುಭಂಗಿಸಿ ಹರುಷದಿಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕೃಷ್ಣ ಹರೇ 4
ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ -
ವನು ಪಾಲಿಪ ಶ್ರೀ ಕೃಷ್ಣ ಹರೇ5
ತಾಟಕೆ ಖರಮಧು ಕೈಟಭಾರಿಪಾ
ಪಾಟವಿ ಸುರಮಖ ರಾಮಹರೇ
ಆಟದಿ ಫಣಿಮೇಲ್ ನಾಟ್ಯವನಾಡಿದ
ಖೇಟವಾಹ ಶ್ರೀ ಕೃಷ್ಣ ಹರೇ 6
ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಜಯ ಕೃಷ್ಣ ಹರೇ 7
ಸೇವಿತ ಹನುಮ ಸುಗ್ರೀವನ ಸಖಜಗ -
ತ್ಪಾವನ ಪರತರ ರಾಮಹರೇ
ದೇವಕಿ ವಸುದೇವರ ಸೆರೆಬಿಡಿಸಿದ
ದೇವ ದೇವ ಶ್ರೀ ಕೃಷ್ಣ ಹರೇ 8
ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ -
ಪರನ ಕಾಯ್ದ ಶ್ರೀ ಕೃಷ್ಣ ಹರೇ 9
ಖಂಡಿಸಿದಶಶಿರ ಚಂಡಾಡಿದ ಕೋ -
ದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿಸಿದ ಕೃಷ್ಣ ಹರೇ 10
ತವಕದಯೋಧ್ಯಾ ಪುರಕೈದಿದ ತ -
ನ್ಯುವತಿಯೊಡನೆ ಶ್ರೀ ರಾಮ ಹರೇ
ರವಿಸುತ ತನಯಗೆ ಪಟ್ಟವಗಟ್ಟಿದ
ಭವತಾರಕ ಶ್ರೀ ಕೃಷ್ಣ ಹರೇ 11
ಭರತನು ಪ್ರಾರ್ಥಿಸಲರಸತ್ವವ ಸ್ವೀ -
ಕರಿಸಿದತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮಕೃಪಾಕರ ಕೃಷ್ಣ ಹರೇ 12
ಧರೆಯೊಳಜ್ಞಜನರನು ಮೋಹಿಪುದಕೆ
ಹರನ ಪೂಜಿಸಿದರಾಮ ಹರೇ
ಹರನ ಪ್ರಾರ್ಥಿಸಿವರವನು ಪಡೆದಾ
ಚರಿತೆಯಗಾಧವು ಕೃಷ್ಣ ಹರೇ 13
ಅತುಳಮಹಿಮ ಸದ್ಯತಿಗಳ ಹೃದಯದಿ
ಸತತ ವಿರಾಜಿಪÀರಾಮಹರೇ
ಸಿತವಾಹನ ಸಾರಥಿಯೆನಿಸಿದ
ಸುರತತಿ ಪೂಜಿತ ಪದ ಕೃಷ್ಣ ಹರೇ 14
ರಾಮ ರಾಮ ಯಂದ್ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ -
ದೇಶವಿಠಲ ಶ್ರೀ ಕೃಷ್ಣ ಹರೇ 15
***
No comments:
Post a Comment