Tuesday, 2 November 2021

ಬಾಗುವ ತೆಂಗಿನ ಮರ ನೋಡ ರಂಗನ ಅಂಘ್ರಿ ankita ramesha BAAGUVA TENGINA MARA NODA RANGANA ANGHRI


 

Kruti by galagali avva


ಬಾಗುವ ತೆಂಗಿನ ಮರನೋಡ 

ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ.


ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ 

ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ 1


ಜಾತಿ ಹಂಸನೋಡ ವನದೊಳು ಮಾತಿನ ಗಿಳಿ ನೋಡ 

ಸಖಿಯೆನೂತನ ಮೃಗ ನೋಡ 

ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ 2


ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ 3


ಚಾರು ಕೋನವ ನೋಡ ಕಮಲವು ತೂರಿ ಬರುತಲಿವೆ ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ4

ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ 5


ಜಾಜಿ ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ 

ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ 6


ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ7


ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ 8


ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ9

****


No comments:

Post a Comment