Saturday 4 December 2021

ಇಂದಿರೆ ನಿನ್ನ ಪಾದ ವಂದಿಸುವ ಎನ್ನ ಮಂದಿರದಲ್ಲಿ ankita gurujagannatha vittala INDIRE NINNA PAADA VANDISUVA ENNA MANDIRADALLIE



ಇಂದಿರೆ ನಿನ್ನ ಪಾದ ವಂದಿಸುವ ಎನ್ನ 

ಮಂದಿರದಲ್ಲಿ ನಿಲ್ಲೆ ಕೇಳುವದೆನ್ನ ಸೊಲ್ಲೆ ||ಪ||


ಅಂಧಕೂಪದ ಭವ ಸಿಂಧೂವಿನೊಳು 

ಬಹುನೊಂದು ನಿನ್ನ ಬೇಡಿಕೊಂಬೆ 

ಪಾಲಿಸು ಜಗದಂಬೆ ||೧||


ಇಂದಿರೇಶನರಾಣಿ 

ಮಂದಭಾಗ್ಯನ ಕರುಣದಿಂದಲಿ 

ಎನ್ನ ನೋಡೆ ನೀ ನಲಿದಾಡೆ ||೨||


ಮಂದಜಾಸನ ಜನನಿ ಸುಂದರ ಸುಗುಣಿ 

ನಿನ್ನ ಕಂದನು ನಾನಮ್ಮ ಶಿರಿಯೆ 

ನೀ ಸುಖ ಸುರಿಯೆ ||೩||


ಎಂದಿಗು ಎನ್ನನು ಪೊಂದಿದ ಈ ಭವ

ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ ||೪||


ದಾತ ಗುರುಜಗನ್ನಾಥವಿಠಲನ

ಪ್ರೀತಿಯಿಂದ ಎನಗೆ ತೋರೆ

ನೀ ಎನ್ನ ಮನೆಗೆ ಬಾರೆ ||೫||

***


Indire ninna pada vandisuva 

enna mandiradalli nille keluvadenna solle ||pa||


Andhakupada bhava sindhuvinolu 

bahunondu ninna bedikombe 

palisu jagadambe ||1||


Indireshanarani 

mandabhagyana karunadindali 

enna node ni nalidade ||2||


Mandajasana janani sundara suguni 

ninna kandanu nanamma siriye 

ni sukha suriye ||3||


Endigu ennanu pondida i bhava

bandhana bidisende ninnanu bedikonde ||4||


Data gurujagannathavittalana

pritiyinda enage tore

ni enna manege bare ||5||

***


ಇಂದಿರೆ ನಿನ್ನ ಪಾದ ವಂದಿಸುವ ಎನ್ನ

ಮಂದಿರದಲ್ಲಿ ನಿಲ್ಲೆ ಕೇಳುವದೆನ ಸೊಲ್ಲೆ ಪ


ಅಂಧಕೂಪದ ಭವ ಸಿಂಧೂವಿನೊಳು ಬಹು

ನೊಂದು ನಿನ್ನ ಬೇಡಿಕೊಂಬೆ ಪಾಲಿಸು ಜಗದಂಬೆ1


ಇಂದಿರೇಶನರಾಣಿ ಮಂದಭಾಗ್ಯನ ಕರುಣ -

ದಿಂದಲಿ ಎನ್ನ ನೋಡೆ ನೀ ನಲಿದಾಡೆ 2


ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ

ಕಂದನು ನಾನಮ್ಮ ಶಿರಿಯೆ ನೀ ಸುಖ ಸುರಿಯೆ 3


ಎಂದಿಗು ಎನ್ನನು ಪೊಂದಿದ ಈ ಭವ

ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ 4


ದಾತ ಗುರುಜಗನ್ನಾಥ ವಿಠಲನ

ಪ್ರೀತಿಯಿಂದ ಎನಗೆ ತೋರೆ, ನೀ ಎನ್ನ ಮನೆಗೆ ಬಾರೆ 5

***


No comments:

Post a Comment