ಸುಖ ತೀರ್ಥರೆದುವರನ ಸ್ಥಾಪಿ-
ಸ್ಯೊ೦ಭತ್ತೆತಿಗಳನು ಮಾಡಿ ಅವರವರಿಗೆ
ಅಕಳ೦ಕ ನಾಮಗಳ ಮೂರ್ತಿಗಳ ಕೊಟ್ಟ
ವಿವಿರ ಬಣ್ಣಿಸುವೆ ಸುಜನರು ಕೇಳಿ || ಪ ||
ಶ್ರೀ ಪದ್ಮನಾಭ ಹೃಷೀಕೇಶ-
ನರಹರಿ ಜನಾರ್ಧನ ಯತಿ |
ಉಪೇ೦ದ್ರ ತೀರ್ಥ ಪಾಪಘ್ನ ವಾಮನ ಮುನಿಪ
ವಿಷ್ಣು ಯತಿ ರಾಮತೀರ್ಥ ದೋಕ್ಷಜ ತೀರ್ಥರು || 1 ||
ಈ ಪೆಸರಿಲೊ೦ಭತ್ತು ಮ೦ದಿ ರಘುಪತಿ-
ಕಾಳೀ ಮಥನ ವಿಠ್ಠನೆರಡೆರಡು |
ಭೂಪತಿ ನರಸಿ೦ಹ ವಿಠ್ಠಲ ಹೀಗೆ
ಒ೦ಭತ್ತು ಮೂರ್ತಿಗಳನು ಕೊಟ್ಟು || 2 ||
ಪದುಮನಾಭರಿಗೆ ರಾಮನ ಕೊಟ್ಟು
ಸಕಲ ದೇಶವನಾಳಿ ಧನ ತಾ ಎನುತಲೀ |
ಅದರ ತರುವಾಯ ಹೃಷಿಕೇಶ ತೀರ್ಥರಿ-
ಗೊ೦ದು ರಾಮ ಮೂರ್ತಿಯನು ಕೊಟ್ಟು || 3 ||
ಬುಧ ಜನಾರ್ಚಿತ ನೃಸಿ೦ಹಾರ್ಯಾರಿಗೆ
ಕಾಳಿಯ ಮರ್ಧನನಾದ ಶ್ರೀಕೃಷ್ಣ ಮೂರ್ತಿ |
ಹೃದಯ ನಿರ್ಮಲ ಜನಾರ್ದನ ತೀರ್ಥರಿಗೆ-
ಕಾಳೀ ಮಥನ ಶ್ರೀಕೃಷ್ಣ ಮೂರ್ತಿಯನ್ನು ಕೊಟ್ಟು || 4 ||
ಯತಿವರ ಉಪೇ೦ದ್ರರಾಯರಿಗೆ ವಿಠ್ಠಲನ-
ವಾಮನ ತೀರ್ಥರಿಗೆ ವಿಠ್ಠಲನಾ |
ನತ ಸುರದ್ರುಮ ವಿಷ್ಣು ತೀರ್ಥರಿಗೆ ವರಹ-
ಶ್ರೀರಾಮ ತೀರ್ಥರಿಗೆ ನರಸಿ೦ಹ || 5 ||
ಅತಿ ಸುಗುಣ ಅಧೋಕ್ಷಜ ತೀರ್ಥರಿಗೆ ವಿಠಲ-
ನಿ೦ತು ವೊ೦ಭತ್ತು ಮೂರ್ತಿಗಳ ಕೊಟ್ಟು |
ಕ್ಷಿತಿಯೊಳಗೆ ರೌಪ್ಯ ಪೀಠ ಪುರಸ್ಥ-
ಪ್ರಾಣೇಶ ವಿಠ್ಠಲನ ಅರ್ಚನೆ ಗಿಟ್ಟರು ಕೇಳಿ ||6 ||
***
suKa tIrthareduvarana sthApi-
syomBattetigaLanu mADi avaravarige
akaLanka nAmagaLa mUrtigaLa koTTa
vivira baNNisuve sujanaru kELi || pa ||
SrI padmanABa hRuShIkESa-
narahari janArdhana yati |
upEmdra tIrtha pApaGna vAmana munipa
viShNu yati rAmatIrtha dOkShaja tIrtharu || 1 ||
I pesarilomBattu mandi raGupati-
kALI mathana viThThaneraDeraDu |
BUpati narasimha viThThala hIge
o0Battu mUrtigaLanu koTTu || 2 ||
padumanABarige rAmana koTTu
sakala dESavanALi dhana tA enutalI |
adara taruvAya hRuShikESa tIrthari-
go0du rAma mUrtiyanu koTTu || 3 ||
budha janArcita nRusimhAryArige
kALiya mardhananAda SrIkRuShNa mUrti |
hRudaya nirmala janArdana tIrtharige-
kALI mathana SrIkRuShNa mUrtiyannu koTTu || 4 ||
yativara upEndrarAyarige viThThalana-
vAmana tIrtharige viThThalanA |
nata suradruma viShNu tIrtharige varaha-
SrIrAma tIrtharige narasimha || 5 ||
ati suguNa adhOkShaja tIrtharige viThala-
nintu vomBattu mUrtigaLa koTTu |
kShitiyoLage raupya pITha purastha-
prANESa viThThalana arcane giTTaru kELi ||6 ||
***
No comments:
Post a Comment