..
ಮಾರುತ ಒಲಿದವಗೆ ಮಾರಮಣನು ಒಲಿವಾ ಪ
ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ.
ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1
ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2
ತುಂಗಾ ತೀರ ನಿವಾಸ ಶೃಂಗಾರ ಗುಣಾಂಬುಧೇಹಿಂಗದೇ ಭಕುತರ ಪೊರೆವ ದಾತ ||ಮಂಗಳ ಮಹಿಮ ಮೋಹನ್ನ ವಿಠ್ಠಲನ್ನ ಪಾ-ದಂಗಳ ಭಜಿಸುವ ಮುನಿವರ್ಯ ದಾತ 3
***
No comments:
Post a Comment