Tuesday 1 June 2021

ರಾಮಚಂದ್ರನೇ ರಘುಕುಲೋತ್ತಮನೇ ankita hanumesha vittala

ರಾಮಚಂದ್ರನೇ ರಘುಕುಲೋತ್ತಮನೇ

ಕಾಮಿತ ಫಲದಾಯಕನೇ ಏಳೈ ಬೇಗನೇ ಪ


ಜಾನಕಿ ದೇವಿಯು ಪನ್ನೀರ ತುಂಬಿದ

ಚಿನ್ನದ ಕಲಶವನು ಧರಿಸಿ ಹರಿ

ನಿನ್ನಯ ಸನ್ನಿಧಿಯಲ್ಲೇ ನಿಂತಿಹಳು

ಇನ್ನಾದರು ಮುಖವನು ತೊಳೆಯಲೇಳೊ ಅ.ಪ.


ದುಷ್ಟ ರಾವಣನ ಕುಟ್ಟಿ ಕೆಡಹಿದ

ಸೃಷ್ಟೀಶನೇ ಏಳೋ

ಕಷ್ಟಾಗಿರುವುದು ಯುದ್ಧದಿ ನಿನಗೆ ದಯಾಳೋ

ಪಟ್ಟವನೇರಲು ಇಟ್ಟಿಹುದು ಮುಹೂರ್ತವ

ಇಂದಿನ ದಿನದೊಳು

ಕೆಂಪಾಯಿತು ಮೂಡಲೊಳು ಅಷ್ಟೈಶ್ವರ್ಯದಿ ಪಟ್ಟಕ ಸಿಂಗರಿಸಿಟ್ಟು

ವಶಿಷ್ಠಾದಿಗಳು ವಿಶಿಷ್ಟರು

ಶ್ರೇಷ್ಠನಾದ ಹನುಮೇಶವಿಠಲ ನೀ ಬರುವದಷ್ಟೇ

ನೋಡುತ ಕುಳಿತಿಹರೋ 1

****


No comments:

Post a Comment